ಕೀವ್: ಸತತ ಹಿನ್ನಡೆಗಳಿಂದ ಕಂಗೆಟ್ಟಿರುವ ರಷ್ಯಾ, ಪೂರ್ವ ಉಕ್ರೇನ್‌ಗೆ ಮತ್ತಷ್ಟು ಸೇನಾ ತುಕಡಿಗಳನ್ನು ಕಳುಹಿಸುತ್ತಿದೆ ಎಂದು ಪಾಶ್ಚಿಮಾತ್ಯ ವಿಶ್ಲೇಷಕರು ತಿಳಿಸಿದ್ದಾರೆ.
ಕೀವ್: ಸತತ ಹಿನ್ನಡೆಗಳಿಂದ ಕಂಗೆಟ್ಟಿರುವ ರಷ್ಯಾ, ಪೂರ್ವ ಉಕ್ರೇನ್‌ಗೆ ಮತ್ತಷ್ಟು ಸೇನಾ ತುಕಡಿಗಳನ್ನು ಕಳುಹಿಸುತ್ತಿದೆ ಎಂದು ಪಾಶ್ಚಿಮಾತ್ಯ ವಿಶ್ಲೇಷಕರು ತಿಳಿಸಿದ್ದಾರೆ.
ಉಕ್ರೇನ್ ಬಿಗಿ ಹಿಡಿತದಲ್ಲಿರುವ ಅವ್‌ದಿವ್ಕಾ ನಗರವನ್ನು ಕೈವಶ ಮಾಡಿಕೊಂಡು ಇಡೀ ಡೊನೆಟಸ್ಕ್ ಪ್ರದೇಶವನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಈ ಯತ್ನ ಮಾಡುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಈ ಬೆನ್ನಲ್ಲೇ ಉಭಯ ಪಡೆಗಳು ಯುದ್ಧಕ್ಕೆ ಸನ್ನದ್ಧವಾಗಿದ್ದು, ಸೇನಾ ಸಲಕರಣೆಗಳ ಸಂಗ್ರಹ ಮತ್ತು ಪೂರೈಕೆಯತ್ತ ಗಮನ ನೀಡುತ್ತಿವೆ.
'ಅವ್‌ದಿವ್ಕಾ ನಗರವನ್ನು ಸುತ್ತುವರಿಯಲು ರಷ್ಯಾ ಯತ್ನಿಸುತ್ತಿದೆ. ಕಳೆದ 24 ತಾಸುಗಳ ಅವಧಿಯಲ್ಲಿ 10 ಬಾರಿ ದಾಳಿ ನಡೆಸಿದೆ' ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಸೋಮವಾರ ಮಧ್ಯರಾತ್ರಿ ದಕ್ಷಿಣ ಉಕ್ರೇನ್ ಮೇಲೆ ಆರು ಆಹೀದ್ ಡ್ರೋನ್ ಮತ್ತು ಕೆಎಚ್-59 ಕ್ಷಿಪಣಿ ಮೂಲಕ ರಷ್ಯಾ ಪಡೆಗಳು ದಾಳಿ ನಡೆಸಿವೆ ಎಂದು ಕೀವ್ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಹೀಗಾಗಿ ಯಾವುದೇ ಹಾನಿಯಾಗಿಲ್ಲ ಎಂದು ವಾಯಪಡೆ ತಿಳಿಸಿದೆ.