ಕುಂಬಳೆ: ಕುಂಬಳೆಯಲ್ಲಿ ಮಧ್ಯವಯಸ್ಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಕುಂಬಳೆ ಶಾಂತಿಪಳ್ಳ ನಿವಾಸಿ ಅಬ್ದುಲ್ ರಶೀದ್ (40) ಮೃತರು.ಐಎಚ್‍ಐಡಿ ಕಾಲೇಜು ಬಳಿಯ ಪೊದೆಯಲ್ಲಿ ಶವ ಪತ್ತೆಯಾಗಿದೆ.
ಇಂದು ಬೆಳಗ್ಗೆ ಸ್ಥಳೀಯರು ಶವವನ್ನು ಗಮನಿಸಿದರು. ಪಾನಮತ್ತರಾಗಿ ಸ್ನೇಹಿತರ ಜತೆಗಿನ ಜಗಳವೇ ಕೊಲೆಗೆ ಕಾರಣ ಎಂದು ಪೋಲೀಸರ ಪ್ರಾಥಮಿಕ ತೀರ್ಮಾನ. ಅಬ್ದುಲ್ ರಶೀದ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತ ಮಧೂರು ಪಟ್ಲದ ಶಾನು ಅಲಿಯಾಸ್ ಶೈನ್ ಎಂಬಾತನನ್ನು ಕೊಲೆ ಮಾಡಿ ಬಾವಿಗೆ ಎಸೆದ ಪ್ರಕರಣದ ಎರಡನೇ ಆರೋಪಿ. ಈತನ ವಿರುದ್ಧ ಇನ್ನೂ ಹಲವು ಪ್ರಕರಣಗಳಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕುಂಬಳೆ ಪೋಲೀಸರು ತಿಳಿಸಿದ್ದಾರೆ.