ಪಾಲಕ್ಕಾಡ್: ಕಾರು ಅಪಘಾತದಲ್ಲಿ ಹಿರಿಯ ಪತ್ರಕರ್ತರೊಬ್ಬರು ದಾರುಣ ಅಂತ್ಯ ಕಂಡಿದ್ದಾನೆ. ಹಿರಿಯ ಪತ್ರಕರ್ತ ಹಾಗೂ ಭಾರತೀಯ ಪತ್ರಕರ್ತರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ(ಐಜೆಯು) ಜಿ.ಪ್ರಭಾಕರನ್(61) ನಿಧನರಾದರು.
ಒಲವಕೋಡು ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸ್ಕೂಟರ್‍ಗೆ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ತಿರುವನಂತಪುರಂ ಮತ್ತು ಪಾಲಕ್ಕಾಡ್‍ನಲ್ಲಿ ಅವರು ದೀರ್ಘಕಾಲ ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದರು. ದಿ ಹಿಂದೂ ಪತ್ರಿಕೆಯಿಂದ ನಿವೃತ್ತರಾದ ನಂತರ ಅವರು ಟೈಮ್ಸ್ ಆಫ್ ಇಂಡಿಯಾದ ಪಾಲಕ್ಕಾಡ್ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಸಮರಸ ಸುದ್ದಿಯ ಆಶೋತ್ತರಗಳ ಬಗ್ಗೆ ಪ್ರೇರಕ ಶಕ್ತಿಯಾಗಿದ್ದ ಪ್ರಭಾಕರನ್ ರಾಷ್ಟ್ರಮಟ್ಟದ ಮಧ್ಯಮ ಮಾನ್ಯತೆಯನ್ನು ಸಮರಸಸುದ್ದಿಗೆ ಒದಗಿಸುವಲ್ಲಿ ಶ್ರಮಿಸಿದ್ದರು. ಪ್ರಭಾಕರನ್ ಅವರ ನಿಧನಕ್ಕೆ ಸಮರಸಸುದ್ದಿ ಬಳಗ ಕಂಬನಿ ಮಿಡಿದಿದ್ದು, ಮೃತರ ಸದ್ಗತಿಗೆ ಪ್ರಾರ್ಥಿಸಿದೆ.