HEALTH TIPS

ಶಿಕ್ಷಣ ಮೂಲಭೂತ ಹಕ್ಕು; ಶುಲ್ಕದ ಹಿನ್ನೆಲೆಯಲ್ಲಿ ಟಿಸಿ ನಿರಾಕರಿಸುವಂತಿಲ್ಲ: ಹೈಕೋರ್ಟ್

                 ಕೊಚ್ಚಿ: ಶಾಲಾ ಶಿಕ್ಷಣ ಶುಲ್ಕ ಪಾವತಿ ಬಾಕಿಯಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

              ಶಿಕ್ಷಣವು ಮೂಲಭೂತ ಹಕ್ಕು ಎಂದು ನ್ಯಾಯಾಲಯವು ಸೂಚಿಸಿದೆ. ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರು ಕಾಞಂಗಾಡ್ ನ 8ನೇ ತರಗತಿ ವಿದ್ಯಾರ್ಥಿಗೆ ಟಿಸಿ ನೀಡುವಂತೆ ಆದೇಶ ಹೊರಡಿಸಿ ಸ್ಪಷ್ಟಪಡಿಸಿದ್ದಾರೆ.

           2023-24ನೇ ಶೈಕ್ಷಣಿಕ ಸಾಲಿನ ಶುಲ್ಕ ಪಾವತಿಸದ ಕಾರಣ ಟಿಸಿ ಅನುಮತಿಸಿಲ್ಲ ಎಂಬುದು ಪ್ರಾಂಶುಪಾಲರ ವಾದವಾಗಿತ್ತು. ವಿದೇಶದಲ್ಲಿ ಓದಲು ಟಿಸಿ ಕೇಳುತ್ತಿದ್ದಾರೆ ಎಂಬ ವಾದವೂ ಕೇಳಿ ಬಂದಿತ್ತು. ಆದರೆ 2022-23ನೇ ಶೈಕ್ಷಣಿಕ ವರ್ಷದ ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಮತ್ತು ವಿದ್ಯಾರ್ಥಿಯ ತಾಯಿ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗಮನಸೆಳೆದರು. ಆಗ ಏಕ ಪೀಠ ವಿದ್ಯಾರ್ಥಿಗೆ ಕೂಡಲೇ ಟಿಸಿ ನೀಡುವಂತೆ ಆದೇಶಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries