ಸಮರಸ ಚಿತ್ರಸುದ್ದಿ: ಕುಂಬಳೆ: ಅನಂತಪುರ ಉಳಿಸಿ ಕ್ರಿಯಾ ಸಮಿತಿಯು ಅನಂತಪುರ ಪರಿಸರದಲ್ಲಿ ದುರ್ನಾತ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣಾ ಕಾರ್ಖಾನೆಗಳಿಗೆದುರಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಎಂಟನೇ ದಿನ ಸೋಮವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಭೇಟಿಯಿತ್ತು ಬೆಂಬಲ ಘೋಷಿಸಿದರು. ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ತಮ್ಮ ಎಲ್ಲಾ ಬೆಂಬಲ ಸದಾ ಇರುವುದು ಎಂಬ ಭರವಸೆಯನ್ನು ನೀಡಿದರು.