ನವದೆಹಲಿ: ಐಫೋನ್ ಹ್ಯಾಕ್ ಪ್ರಯತ್ನ ಸಂಬಂಧ ವಿರೋಧ ಪಕ್ಷಗಳ ನಾಯಕರಿಗೆ ಕಳಿಸಿರುವ ಸಂದೇಶದ ಬಗ್ಗೆ ಆಯಪಲ್ ಪ್ರತಿಕ್ರಿಯೆ ನೀಡಿದೆ. ಇದು ಯಾವುದೇ ನಿರ್ದಿಷ್ಟ ದೇಶದ ಸರ್ಕಾರದ ದಾಳಿ ಎಂದು ಹೇಳಲು ಬರುವುದಿಲ್ಲ ಎಂದಿದೆ. ಅಲ್ಲದೆ ಈ ಎಚ್ಚರಿಕೆಗೆ ಕಾರಣ ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಸರ್ಕಾರಿ ಪ್ರಯೋಜಿತ ಹ್ಯಾಕರ್‌ಗಳಿಂದ ನಿಮ್ಮ ಐಫೋನ್‌ಗಳ ಹ್ಯಾಕಿಂಗ್ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ, ಶಶಿ ತರೂರ್, ಮಹುವಾ ಮೊಯಿತ್ರಾ ಸಹಿತ ಹಲವು ವಿರೋಧ ಪಕ್ಷಗಳ ನಾಯಕರಿಗೆ ಆಯಪಲ್ ಸಂದೇಶ ಕಳುಹಿಸಿತ್ತು.