ನವದೆಹಲಿ: ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಏಳು ವಿಕೆಟ್ ಅಂತರದ ಜಯ ಗಳಿಸಿದೆ. ಇಡೀ ದೇಶವೇ ಭಾರತದ ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿತು. ಆದರೆ 'ಮೊಹಬ್ಬತ್ ಕಿ ದುಕಾನ್' ಸುಮ್ಮನಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕೆ ಮಾಡಿದ್ದಾರೆ.

ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 'ಭಾರತ್' ಜಯ ಸಾಧಿಸಿದೆ. ಸಂಭ್ರಮದಲ್ಲಿ ತೇಲಾಡಿದ ಇಡೀ ದೇಶವೇ ವಿಜಯೋತ್ಸವ ಆಚರಿಸಿಕೊಂಡಿತು. ಆದರೆ ಮೊಹಬ್ಬತ್ ಕಿ ದುಕಾನ್ ಒಂದೇ ಒಂದು ಪದವನ್ನು ಹೇಳಿಲಿಲ್ಲ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ರಾಷ್ಟ್ರಪತಿ ಏರ್ಪಡಿಸಿದ್ದ ಔತನಕೂಟದ ಆಹ್ವಾನ ಪತ್ರದಲ್ಲಿ ಇಂಡಿಯಾ ಬದಲು ಭಾರತ್ ಎಂದು ಉಲ್ಲೇಖ ಮಾಡಲಾಗಿತ್ತು. ಅಸ್ಸಾಂ ಸಿಎಂ ಕೂಡ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಇಂಡಿಯಾ ಬದಲು 'ಭಾರತ್' ಎಂದು ಉಲ್ಲೇಖಿಸಿದ್ದಾರೆ.