ನವದೆಹಲಿ: ಹುಡುಗಿಯರು ಹೈ ಹೀಲ್ಡ್ ಧರಿಸಿ ಹೆಜ್ಜೆ ಹಾಕುವುದನ್ನು ನೀವು ನೋಡಿರಬಹುದು. ಆದರೆ ಪುರುಷರು ಹೈ ಹೀಲ್ಡ್ ಧರಿಸಿ ನಡೆಯುವುದನ್ನು ಎಂದಾದರೂ ನೋಡಿದ್ದೀರಾ. ಆದರೆ ಇಲ್ಲಿ ಕೆಲವು ಪುರುಷರು ಹೈ ಹೀಲ್ಡ್ ಶೂ ಧರಿಸಿ ನಡೆದಿದ್ದಾರೆ. ಈ ಕಾರ್ಯದ ಹಿಂದೆ ಒಂದು ಮಹತ್ತರವಾದ ಉದ್ದೇಶ ಇದೆ.

ಎನ್‌ಜಿಒ ಒಂದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸಾಚಾರ, ಅತ್ಯಾಚಾರ ತಡೆಗಟ್ಟುವ ಸಲುವಾಗಿ ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ವಾಕ್ ಎ ಮೈಲ್ ಇನ್ ಹರ್ ಶೂ' ಎಂಬ ಈ ಕಾರ್ಯಕ್ರಮವನ್ನು ಪ್ರತಿವರ್ಷವೂ ಸಂಸ್ಥೆ ಪಾಶ್ಚಿಮಾತ್ಯ ದೇಶಗಳಲ್ಲಿ ಏರ್ಪಡಿಸುತ್ತಾ ಬರುತ್ತಿದೆ. ಅದೇ ರೀತಿ ಈ ಬಾರಿ ಜಮೈಕಾದ ಮಂಡೆವಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
'ವಾಕ್ ಎ ಮೈಲ್ ಇನ್ ಹರ್ ಶೂ' ಎಂಬ ಈ ಜಾಥಾದಲ್ಲಿ ನೂರಾರು ಪುರುಷರು, ಸ್ತ್ರೀಯರು ಬಳಸುವ ಕೆಂಪು ಬಣ್ಣದ ಹೈ ಹೀಲ್ಡ್ ಶೂ ಧರಿಸಿ ಮೈಲು ದೂರ ನಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.