ನವದೆಹಲಿ: 'ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್' (ಆರ್‌ಆರ್‌ಟಿಎಸ್) ವ್ಯವಸ್ಥೆಯ ರೈಲುಗಳಿಗೆ 'ನಮೋ ಭಾರತ್' ರೈಲು ಎಂದು ಹೆಸರಿಸಲಾಗಿದೆ.
ನವದೆಹಲಿ: 'ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್' (ಆರ್‌ಆರ್‌ಟಿಎಸ್) ವ್ಯವಸ್ಥೆಯ ರೈಲುಗಳಿಗೆ 'ನಮೋ ಭಾರತ್' ರೈಲು ಎಂದು ಹೆಸರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲುಗಳ ಸಂಚಾರಕ್ಕೆ ಶುಕ್ರವಾರ ಹಸಿರು ನಿಶಾನೆ ತೋರಲಿದ್ದಾರೆ.
ಆರ್‌ಆರ್‌ಟಿಎಸ್ ಭಾಗವಾದ ದೆಹಲಿ-ಗಾಜಿಯಾಬಾದ್-ಮೀರಠ್ ನಡುವಿನ 17 ಕಿ.ಮೀ.
ಕಾಂಗ್ರೆಸ್ ಟೀಕೆ: ಆರ್‌ಆರ್‌ಟಿಎಸ್ ರೈಲುಗಳಿಗೆ 'ನಮೋ ಭಾರತ್' ಎಂದು ಹೆಸರಿಸಿರುವುದನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಗುರುವಾರ ಟೀಕಾಪ್ರಹಾರ ನಡೆಸಿದೆ.
'ನಮೋ ಸ್ಟೇಡಿಯಂ ನಂತರ ಈಗ ನಮೋ ರೈಲುಗಳು. ಅವರ ಸ್ವಯಂ ಗೀಳಿಗೆ ಮಿತಿ ಎಂಬುದೇ ಇಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
'ಭಾರತ ಅಂತಾದರೂ ಯಾಕೆ ಕರೆಯಬೇಕು? ದೇಶದ ಹೆಸರನ್ನು ನಮೋ ಎಂದು ಬದಲಾಯಿಸಿ ಅಷ್ಟೆ' ಎಂದು ಮತ್ತೊಬ್ಬ ಮುಖಂಡ ಪವನ್ ಖೇರಾ ಟೀಕಿಸಿದ್ದಾರೆ.