ವಾಷಿಂಗ್ಟನ್: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾರತೀಯ ಮೂಲದ ಇಬ್ಬರು ಅಮೆರಿಕನ್ ವಿಜ್ಞಾನಿಗಳಾದ ಅಶೋಕ್ ಗಾಡ್ಗೀಲ್ ಮತ್ತು ಸುಬ್ರಾ ಸುರೇಶ್ ಅವರಿಗೆ ದೇಶದ ಅತ್ಯುನ್ನತ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಯುಸಿ ಬರ್ಕ್ಲಿಯಲ್ಲಿ ಸಿವಿಲ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಎಮೆರೈಟಸ್ ಅಶೋಕ್ ಗಾಡ್ಗಿಲ್ ಅವರಿಗೆ ಪ್ರತಿಷ್ಠಿತ ಶ್ವೇತಭವನ ರಾಷ್ಟ್ರೀಯ ಪದಕವನ್ನು ಬೈಡನ್ ಪ್ರದಾನ ಮಾಡಿದರು.
ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಶ್ವೇತಭವನದ ರಾಷ್ಟ್ರೀಯ ಪದಕವನ್ನು ಪಡೆದ 12 ಮಂದಿಯಲ್ಲಿ ಅಶೋಕ್ ಗಾಡ್ಗೀಲ್ ಅವರು ಒಬ್ಬರಾಗಿದ್ದಾರೆ.
ಇಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನದಲ್ಲಿನ ಸಂಶೋಧನೆಗಾಗಿ ಮತ್ತು ವಿಶೇಷವಾಗಿ ವಸ್ತು ವಿಜ್ಞಾನದ ಅಧ್ಯಯನಕ್ಕಾಗಿ ಬ್ರೌನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಸುಬ್ರಾ ಸುರೇಶ್ ಅವರಿಗೆ ರಾಷ್ಟ್ರೀಯ ವಿಜ್ಞಾನ ಪದಕವನ್ನು ನೀಡಿ ಗೌರವಿಸಲಾಗಿದೆ.