ಸಮರಸ ಚಿತ್ರಸುದ್ದಿ: ಕುಂಬಳೆ: ಮಂಜೇಶ್ವರ ಸನಿಹದ ಬಲ್ಲಂಗುಡೇಲು ಶ್ರೀ ಪಾಡಾಂಗೆರೆ ಭಗವತೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿಗೆ ದಿವ್ಯ ನೇತೃತ್ವ ನೀಡುತ್ತಿರುವ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಹಾಗೂ ಸಮಿತಿಯ ಗೌರವಾಧ್ಯಕ್ಷ ಹಿರಿಯ ಉದ್ಯಮಿ, ಕೊಡುಗೈ ದಾನಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಶ್ರೀ ಪಾಡಾಂಗೆರೆ ಭಗವತೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಕೊಂಡೆವೂರುಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರನ್ನು ಕ್ಷೇತ್ರ ಸಮಿತಿಯಿಂದ ಗೌರವಿಸಲಾಯಿತು.