HEALTH TIPS

ಚುನಾವಣಾ ಕಣದಲ್ಲಿ ಏನೇನು? ಹಿಮಂತ್‌ಗೆ ಚುನಾವಣಾ ಆಯೋಗದ ನೋಟಿಸ್

                      ರಾಯಪುರ (PTI): ಬಿಜೆಪಿ 15 ವರ್ಷ ಛತ್ತೀಸಗಢದಲ್ಲಿ ಆಡಳಿತ ನಡೆಸಿದೆ. ಆದರೆ, ರಾಜ್ಯ ರಚನೆಯಾದಾಗಿನಿಂದ ಒಂಬತ್ತು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪಕ್ಷವು 9 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಈ ಬಾರಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ.

              ಛತ್ತೀಸಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಒಂಬತ್ತು ಸ್ಥಾನಗಳಲ್ಲಿ ಸೀತಾಪುರ, ಪಾಲಿ-ತನಾಖರ್, ಮಾರ್ವಾಹಿ, ಮೊಹ್ಲಾ-ಮನ್ಪುರ್ ಮತ್ತು ಕೊಂಟಾ ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಾಗಿದ್ದರೆ, ಉಳಿದ ನಾಲ್ಕು ಸ್ಥಾನಗಳಾದ ಖಾರ್ಸಿಯಾ, ಕೊರ್ಬಾ, ಕೋಟಾ ಮತ್ತು ಜೈಜೈಪುರ ಸಾಮಾನ್ಯ ಕ್ಷೇತ್ರಗಳಾಗಿವೆ.

               2003, 2008 ಮತ್ತು 2013ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಿತು. 2018ರಲ್ಲಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆಲ್ಲುವ ಮೂಲಕ ರಮಣ್ ಸಿಂಗ್ ಸರ್ಕಾರ ಅಧಿಕಾರ ಗದ್ದುಗೆಗೇರಿತು. ಬಿಜೆಪಿಯ ಸಂಖ್ಯಾಬಲ ಈಗ 15ಕ್ಕೆ ಕುಸಿದಿದೆ.

                'ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಸಾರ್ವಜನಿಕರಿಂದ ಉತ್ತಮ ಬೆಂಬಲವೂ ದೊರೆತಿದೆ' ಎಂದು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಸಂತೋಷ್ ಪಾಂಡೆ ತಿಳಿಸಿದ್ದಾರೆ.

ತಿರುಚಿದ ವಿಡಿಯೊ: ಎಫ್‌ಐಆರ್ ದಾಖಲು

                ಬಿಜೆಪಿ ಅಭ್ಯರ್ಥಿ ಕೈಲಾಶ್ ವಿಜಯವರ್ಗೀಯ ಅವರನ್ನು ರಾವಣ ಮತ್ತು ಅವರ ಪ್ರತಿಸ್ಪರ್ಧಿಯನ್ನು ರಾಮನೆಂದು ಬಿಂಬಿಸಿ, ಸಿದ್ದಪಡಿಸಿದ್ದ ವಿಡಿಯೊ ಸಂಬಂಧ ಇಂದೋರ್ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.

             ನವೆಂಬರ್ 17 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇಂದೋರ್ -1 ಕ್ಷೇತ್ರದಿಂದ ವಿಜಯವರ್ಗೀಯ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

                  ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದ್ದರೆ, ವಿವಿಧ ಕಲಂ ಅಡಿ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

              ದಸರಾ ದಿನದಂದು ವಾಟ್ಸ್‌ಆಯಪ್‌ನಲ್ಲಿ 'ಸಿಯಾಸಿ ದಾವ್ ಪೆಚ್' ಎಂಬ ಗುಂಪಿನಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಕಾನೂನು ಘಟಕ ದೂರು ನೀಡಿತ್ತು. ವಿವಾದಾತ್ಮಕ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                                        ಹಿಮಂತ್‌ಗೆ ಚುನಾವಣಾ ಆಯೋಗದ ನೋಟಿಸ್

            ಕೋಮು ಪ್ರಚೋದನಕಾರಿ ಹೇಳಿಕೆಗಾಗಿ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದ್ದರೂ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ತಮ್ಮ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.

                ಛತ್ತೀಸಗಢದ ಕವರ್ಧಾದಲ್ಲಿ ಅಕ್ಟೋಬರ್ 18 ರಂದು ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶರ್ಮಾ ಅವರು 'ಅಕ್ಬರ್ ಅವರನ್ನು ಕಳುಹಿಸದಿದ್ದರೆ ಮಾತಾ ಕೌಸಲ್ಯ ಭೂಮಿ ಅಪವಿತ್ರವಾಗುತ್ತದೆ' ಎಂದು ಹೇಳಿದ್ದರು.

                  ಅಕ್ಬರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಶರ್ಮಾ ವಿರುದ್ಧ ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿತ್ತು. ಭಗವಾನ್ ರಾಮನ ತಾಯಿ ಮಾತಾ ಕೌಸಲ್ಯ ಆಧುನಿಕ ಛತ್ತೀಸಗಢದವರು ಎಂದು ನಂಬಲಾಗಿದೆ. ಅಕ್ಟೋಬರ್ 30 ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಆಯೋಗ ಸೂಚಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries