ಕಾಸರಗೋಡು: ಜಿಲ್ಲೆಯ ಐದು ಅಗ್ನಿಶಾಮಕ ಠಾಣೆಗಳ ಅಧೀನದಲ್ಲಿ ತರಬೇತಿ ಪಡೆದ 'ಆಪ್ತ ಮಿತ್ರ' ಸ್ವಯಂಸೇವಕರಿಗೆ ತುರ್ತು ಸ್ಪಂದನ ಕಿಟ್‍ಗಳನ್ನು ವಿತರಿಸಲಾಯಿತು. ಲೈಫ್ ಜಾಕೆಟ್, ಹೆಲ್ಮೆಟ್, ಗಮ್ ಬೂಟುಗಳು, ಪ್ರಥಮ ಚಿಕಿತ್ಸಾ ಕಿಟ್, ತುರ್ತು ಬೆಳಕಿನ ವ್ಯವಸ್ಥೆಯ 14 ರೀತಿಯ ತುರ್ತು ರಕ್ಷಣಾ ಸಾಧನಗಳನ್ನು ಕಿಟ್ ಒಳಗೊಂಡಿದೆ. ಜಿಲ್ಲೆಯ ಅಪ್ಡ ಮಿತ್ರ ಸ್ವಯಂಸೇವಕ ಪಡೆಯಲ್ಲಿ ಒಟ್ಟು 300 ಜನರ ಯೊಧರಿದ್ದಾರೆ.
ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಅವರು ಸೈನಿಕರಾದ ಅಶ್ವಿನಿ, ಚೈತ್ರಾ, ಸುಲೈಮಾನ್ ಮತ್ತು ಇಬ್ರಾಹಿಂ ಖಲೀಲ್ ಅವರಿಗೆ ವಿತರಿಸುವ ಮೂಲಕ ವಿತರಣೆಯ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ನವೀನ್‍ಬಾಬು, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಬಿಜುಮೋನ್, ವಿಪತ್ತು ನಿರ್ವಹಣಾ ಅಧೀಕ್ಷಕಿ ಎಸ್.ಸರಿತಾ, ಅಪಾಯ ವಿಶ್ಲೇಷಕ ಪ್ರೇಮ್ ಜಿ.ಪ್ರಕಾಶ್, ಕಾಸರಗೋಡು ಅಗ್ನಿ ರಕ್ಷಾ ನಿಲಯ ಸಹಾಯಕ ಠಾಣಾಧಿಕಾರಿ ಸಂತೋಷ್ ಕುಮಾರ್, ಅಗ್ನಿಶಾಮಕ ಅಧಿಕಾರಿಗಳಾದ ಉಮ್ಮರ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.