ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕೇರಳೋತ್ಸವದಂಗವಾಗಿ ನಡೆಸಲಾಗುವ ಕ್ರೀಡೋತ್ಸವಕ್ಕೆ ಬಜಕೂಡ್ಲಿನಲ್ಲಿರುವ ಪಂಚಾಯತಿ ಕ್ರೀಡಾಂಗಣದಲ್ಲಿ ಕ್ರಿಕೇಟ್ ಪಂದ್ಯಾಟದೊಂದಿಗೆ ಶನಿವಾರ ಚಾಲನೆ ನೀಡಲಾಯಿತು. ಪಂಚಾಯತಿ ಮಟ್ಟದ ಕೇರಳೋತ್ಸವವನ್ನು ಗ್ರಾ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಶಿಕ್ಷಣ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಪಂ.ಸದಸ್ಯರಾದ ನರಸಿಂಹ ಪೂಜಾರಿ, ಮಹೇಶ್ ಭಟ್, ಶಶಿಧರ, ಇಂದಿರಾ, ಆಶಾಲತ, ರಾಜಕೀಯ ನೇತಾರರಾದ ಸುಮಿತ್ ರಾಜ್, ಮಾಯಿಲ ನಾಯ್ಕ್, ಹಂಸಾರ್ ಮೊದಲಾದವರು ಉಪಸ್ಥಿತರಿದ್ದರು. ಪಂ.ಸದಸ್ಯೆ ಉಷಾ ಗಣೇಶ್ ಸ್ವಾಗತಿಸಿ ಇμರ್Áದ್ ವಂದಿಸಿದರು. ನವಾಸ್ ಮತ್ರ್ಯ ಕಾರ್ಯಕ್ರಮ ನಿರೂಪಿಸಿದರು.
ಕೇರಳೋತ್ಸವದ ಪ್ರಥಮ ದಿನ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಮ್ ಪೆರ್ಲ ಪ್ರಥಮ, ನೇತಾಜಿ ಪೆರ್ಲ ದ್ವಿತೀಯ ಬಹುಮಾನ ಗಳಿಸಿಕೊಂಡಿತು.
ಕಾಟುಕುಕ್ಕೆ ಶಾಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್ ಸ್ಪರ್ಧೆ ನಡೆಯಿತು. ಇಂದು ಬೆಳಿಗ್ಗೆ 9.30 ಕ್ಕೆ ಪಂಚಾಯತಿ ಸಭಾಂಗಣದಲ್ಲಿ ವೇದಿಕೇತರ ಸ್ಪರ್ಧೆಗಳು, ಸಂಜೆ 4 ಕ್ಕೆ ಬಡ್ಸ್ ಶಾಲೆಯಲ್ಲಿ ಬ್ಯಾಡ್ಮಿಂಟನ್, ನಾಳೆ(ಅ.10ಕ್ಕೆ) ಬೆಳಗ್ಗೆ 9.30 ಕ್ಕೆ ಪಂಚಾಯತಿ ಸಭಾಂಗಣದಲ್ಲಿ ವೇದಿಕೇತರ ಸ್ಪರ್ಧೆಗಳು, ಮಧ್ಯಾಹ್ನ 2 ರಿಂದ ಬಡ್ಸ್ ಶಾಲೆಯಲ್ಲಿ ಬ್ಯಾಡ್ಮಿಂಟನ್, ಅ.11ಕ್ಕೆ ಮಧ್ಯಾಹ್ನ 2 ಕ್ಕೆ ಬೆದ್ರಂಪಳ್ಳದಲ್ಲಿ ವಾಲಿಬಾಲ್ ಪಂದ್ಯಾಟ, ಅ.12ಕ್ಕೆ ಬೆಳಗ್ಗೆ 9.30 ಕ್ಕೆ ಪಂಚಾಯತಿ ಸಭಾಂಗಣದಲ್ಲಿ ಚೆಸ್ ಸ್ಪರ್ಧೆ, ಮಧ್ಯಾಹ್ನ 2 ರಿಂದ ಸ್ವರ್ಗ ಶಾಲಾ ಕ್ರೀಡಾಂಗಣದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ಅ.13ಕ್ಕೆ ಮಧ್ಯಾಹ್ನ 2 ಕ್ಕೆ ಮಲಂಗರೆ ಕ್ರೀಡಾಂಗಣದಲ್ಲಿ ಕಬ್ಬಡಿ ಸ್ಪರ್ಧೆ, ಅ.14ಕ್ಕೆ ಪೆರ್ಲ ಶಾಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9.30 ಕ್ಕೆ ಆಟೋಟ ಸ್ಪರ್ಧೆಗಳು, ಅ.15ಕ್ಕೆ ಬೆಳಗ್ಗೆ 9.30 ರಿಂದ ಪಂಚಾಯತಿ ಸಭಾಂಗಣದಲ್ಲಿ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಅಂದು ಸಂಜೆ ಕೇರಳೋತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರಗಲಿದೆ. ಸ್ಪರ್ಧೆಗಳಲ್ಲಿ ಕೊನೆಯ ಕ್ಷಣದ ಬದಲಾವಣೆಗಳ ಬಗ್ಗೆ ತಿಳಿಯಲು ಸ್ಪರ್ಧಾರ್ಥಿಗಳು ಕಾರ್ಯಕ್ರಮದ ಸಂಯೋಜಕರನ್ನು ಸಂಪರ್ಕಿಸಬಹುದೆಂದು ಪಂಚಾಯತಿ ಪ್ರಕಟಣೆ ತಿಳಿಸಿದೆ.