ಚಂಡೀಗಢ: ಜಮ್ಮು ಮತ್ತು ಕಾಶ್ಮೀರ ಮೂಲದ ಇಬ್ಬರನ್ನು ಬಂಧಿಸುವ ಮೂಲಕ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಘಟಕವನ್ನು ಭೇದಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಚಂಡೀಗಢ: ಜಮ್ಮು ಮತ್ತು ಕಾಶ್ಮೀರ ಮೂಲದ ಇಬ್ಬರನ್ನು ಬಂಧಿಸುವ ಮೂಲಕ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಘಟಕವನ್ನು ಭೇದಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಅಮೃತಸರದ ರಾಜ್ಯ ವಿಶೇಷ ಕಾರ್ಯಾಚರಣೆ ಪಡೆಯು ಕೇಂದ್ರ ಏಜೆನ್ಸಿಗಳ ಸಹಾಯದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
'ಅಮೃತಸರದ ರಾಜ್ಯ ವಿಶೇಷ ಕಾರ್ಯಾಚರಣೆ ದಳ ಕೇಂದ್ರ ಏಜೆನ್ಸಿ ಜತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತಯಬಾದ ಘಟಕವನ್ನು ಭೇದಿಸಿ, ಜಮ್ಮುಕಾಶ್ಮೀರದ ಇಬ್ಬರು ನಿವಾಸಿಗಳನ್ನು ಬಂಧಿಸಲಾಗಿದೆ' ಎಂದು ಪಂಜಾಬ್ ಪೊಲೀಸರು 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಘಟಕವನ್ನು ಲಷ್ಕರ್‌ನ ಸಕ್ರೀಯ ಸದಸ್ಯನಾದ ಫಿರ್ದೌಸ್ ಅಹಮದ್ ಭಟ್ ನಿರ್ವಹಿಸುತ್ತಿದ್ದ ಎಂದು ಮಾಹಿತಿ ನೀಡಿರುವ ಯಾದವ್, ಈ ಕಾರ್ಯಾಚರಣೆ ಪಂಜಾಬ್‌ನಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಉಗ್ರವಾದದ ಘಟಕಕ್ಕೆ ನೀಡಿದ ದೊಡ್ಡ ಹೊಡೆತ ಎಂದು ಅವರು ಬಣ್ಣಿಸಿದ್ದಾರೆ.