ತಿರುವನಂತಪುರಂ: ವಿಶ್ವದ ಅಂತಾರಾಷ್ಟ್ರೀಯ ಬಂದರುಗಳ ಪಟ್ಟಿಯಲ್ಲಿ ವಿಳಿಂಜಂ ಅಗ್ರಸ್ಥಾನದಿಂದ ಆರಂಭಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ವಿಳಿಂಜಂ ಬಂದರಿನ ವಿಷಯದಲ್ಲೂ ವಿರೋಧಿ ಶಕ್ತಿಗಳು ಇದ್ದವು ಎಂಬುದು ಸತ್ಯ. ಕೆಲವು ವಾಣಿಜ್ಯ ಲಾಬಿಗಳು ಬಂದರು ಇಲ್ಲಿ ಸಾಕಾರಗೊಳ್ಳಲು ಆಸಕ್ತಿ ಹೊಂದಿರಲಿಲ್ಲ. ಅವರು ವಿಶೇಷ ರೀತಿಯಲ್ಲಿ ಇದನ್ನು ವಿರೋಧಿಸಿದರು. ಆದರೆ ಎಲ್ಲವನ್ನೂ ಮೀರಿ ಸಾಧನೆಗೈಯ್ಯಲು ಸಾಧ್ಯವಾಗಿದೆ.
ವಿಳಿಂಜಂ ಅಂತರಾಷ್ಟ್ರೀಯ ಬಂದರಿಗೆ ಪ್ರಥಮ ಬಾರಿಗೆ ಆಗಮಿಸಿದ ಸರಕು ಸಾಗಣೆ ಹಡಗನ್ನು ನಿನ್ನೆ ಸಂಜೆ ನಡೆದ ಸ್ವಾಗತಿಸಿದ ನಂತರ ಮುಖ್ಯಮಂತ್ರಿಗಳು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಳಿಂಜಂ ಯೋಜನೆಯು ದೇಶಕ್ಕೆ ಕೇರಳದ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ವಿಳಿಂಜಂ ದೇಶದಲ್ಲಿ ಯಾವುದೇ ಇತರ ಬಂದರು ಹೊಂದಿರದ ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ. ಬಹಳ ದಿನಗಳಿಂದ ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಬಳಸದೇ ಇರುವುದು ವಿಷಾದನೀಯ. ಆ ಪರಿಸ್ಥಿತಿಗೆ ಈಗ ತೆರೆ ಬಿದ್ದಿದೆ ಎಂದರು.
ಒಮ್ಮೆ ಈ ಬಂದರು ಸಾಕಾರಗೊಂಡರೆ, ಕೇರಳವು ದೇಶದ ಕಂಟೈನರ್ ವ್ಯಾಪಾರದ ಕೇಂದ್ರವಾಗಲಿದೆ. ಆರು ತಿಂಗಳಲ್ಲಿ ಕೇರಳ ಆ ಮಟ್ಟಕ್ಕೆ ಸಾಗಲಿದೆ. ವಿಳಿಂಜಂ ಉದ್ಯಮ, ವಾಣಿಜ್ಯ, ಸಾರಿಗೆ ಮತ್ತು ಪ್ರವಾಸೋದ್ಯಮದಂತಹ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಹೀಗಾಗಿ ರಾಜ್ಯದ ಸಾಮಾನ್ಯ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಬಂದರು ನಿರ್ಮಾಣ ಪೂರ್ಣಗೊಂಡರೆ, ಸಂಬಂಧಿತ ಕೈಗಾರಿಕೆಗಳಿಗೆ ಉತ್ತಮ ಅವಕಾಶಗಳಿವೆ. ಅವೆಲ್ಲವನ್ನೂ ಸದುಪಯೋಗಪಡಿಸಿಕೊಳ್ಳಬೇಕು. ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಉದ್ಯಮಿಗಳು ಈ ನಿಟ್ಟಿನಲ್ಲಿ ಪೂರ್ಣ ಹೃದಯದಿಂದ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಂದರು ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ಮಾತನಾಡಿ, ದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ ವಿಳಿಂಜಂ ಬಂದರು ಯಶಸ್ಸಿನ ಸಂಕೇತವಾಗಿದೆ ಎಂದರು.
ಕೇಂದ್ರ ಸಚಿವ ವಿ. ಮುರಳೀಧರನ್, ಸಚಿವರಾದ ಕೆ. ರಾಜನ್, ವಿ. ಶಿವನ್ Àಕುಟ್ಟಿ, ಜಿ.ಆರ್. ಅನಿಲ್, ಅಂತೋಣಿ ರಾಜು, ಸಾಜಿ ಚೆರಿಯನ್, ಕೆ.ಎನ್. ಬಾಲಗೋಪಾಲ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಮುಖ್ಯ ಕಾರ್ಯದರ್ಶಿ ಡಾ. ವಿ. ವೇಣು, ಸಂಸದ ಶಶಿ ತರೂರ್, ಶಾಸಕ ಎಂ. ವಿನ್ಸೆಂಟ್À, ಮೇಯರ್ ಆರ್ಯ ರಾಜೇಂದ್ರನ್ ಮತ್ತಿತರರು ಉಪಸ್ಥಿತರಿದ್ದರು.