ಕಾಸರಗೋಡು: ಸಮಗ್ರ ಶಿಕ್ಷಾ ಕೇರಳ ಯೋಜನೆಯನ್ವಯ ಶಾಲಾ ಹೆಣ್ಮಕ್ಕಳಿಗೆ ಆತ್ಮ ರಕ್ಷಣಾ ತರಬೇತಿಯನ್ನು ನೀಡಲಾಗುತ್ತಿದೆ. ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಲಿಂಗ ತಾರತಮ್ಯ ನಿವರಣೆಯೊಂದಿಗೆ ಸಮಾನತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮತ್ತು ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಬಾಲಕಿಯರಿಗಾಗಿ ಆತ್ಮರಕ್ಷಣಾ ಕಲೆಯ ತರಬೇತಿ ಆಯೋಜಿಸಲಾಗುತ್ತಿದೆ.
ತರಬೇತಿಯ ಬಿಆರ್‍ಸಿ ಮಟ್ಟದ ಉದ್ಘಾಟನೆ ಕಾಞಂಗಾಡಿನ ಜಿಆರ್‍ಎಫ್‍ಟಿಎಚ್‍ಎಸ್ ಫಾರ್ ಗಲ್ರ್ಸ್‍ನಲ್ಲಿ ಜರುಗಿತು. ಕಾಞಂಗಾಡು ನಗರಸಭಾ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಪ್ರಭಾವತಿ ಸಮಾರಂಭ ಉದ್ಘಾಟಿಸಿದರು. ಕಾಞಂಗಾಡು ನಗರಸಭಾ ಸದಸ್ಯ ಕೆ.ಕೆ.ಜಾಫರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮದರ್ ಪಿಟಿಎ ಅಧ್ಯಕ್ಷೆ ಹಾಗೂ 'ಸಧೈರ್ಯಂ' ಕಾರ್ಯಕ್ರಮ ಸಂಯೋಜಕಿ ಓ.ಸುನಿತಾ, ಬಿಸಿಆರ್‍ಸಿ ಸಂಯೋಜಕರಾದ ಪಿ.ಅನುಶ್ರೀ, ಕೆ.ವಿ.ಶ್ರೀಜಾ ಉಪಸ್ಥಿತರಿದ್ದರು. ಕರಾಟೆ ತರಬೇತುದಾರರಾದ ರಾಜೇಶ್ ಅತಿಯಾಳ್ ಮತ್ತು ಸುನೀತಾ ರಾಜೇಶ್ ತರಬೇತಿಯ ನೇತೃತ್ವ ವಹಿಸಿದ್ದರು. ಮುಖ್ಯಶಿಕ್ಷಕಿ ಕೆ.ಪ್ರೀತಾ ಸ್ವಾಗತಿಸಿದರು. ಬಿಆರ್‍ಸಿ ತರಬೇತುದಾರ ಪಿ.ರಾಜಗೋಪಾಲನ್ ವಂದಿಸಿದರು.