ಎರ್ನಾಕುಳಂ: ಶಾಸಕರ ನಕಲಿ ಸ್ಟಿಕ್ಕರ್ ಅಂಟಿಸಿದ ತೆಲಂಗಾಣ ನೋಂದಣಿ ವಾಹನದೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ತೆಲಂಗಾಣ ಮೂಲದ ಅಜಿತ್ ಬುಮ್ಮಾರನನ್ನು ಮರಡು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮರಡು ಮಟ್ಟ ಎಂಬಲ್ಲಿ ಗೋಡೆ ಒಡೆದಿದೆ.
ಅಪಘಾತದ ಬಳಿಕ ವಾಹನವನ್ನು ವಶಕ್ಕೆ ತೆಗೆದುಕೊಂಡಾಗ ವಾಹನದ ಮೇಲೆ ಅಂಟಿಸಲಾಗಿದ್ದ ಎಂಎಲ್ ಎ ಸ್ಟಿಕ್ಕರ್ ನಕಲಿ ಎಂಬುದು ಪತ್ತೆಯಾಗಿದೆ. ನಂತರದ ತನಿಖೆಯಲ್ಲಿ, ಅಜಿತ್ ಬುಮ್ಮಾರ ತೆಲಂಗಾಣದಲ್ಲಿ ವಂಚನೆ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕೊಚ್ಚಿ ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳನ್ನು ಬಂಧಿಸಲು ತೆಲಂಗಾಣ ಪೋಲೀಸ್ ಅಧಿಕಾರಿಗಳನ್ನು ಕೊಚ್ಚಿಗೆ ಕಳುಹಿಸಲಾಗಿದೆ. ಆರೋಪಿಗಳು ಬಾಡಿಗೆ ಕಾರಿನಲ್ಲಿ ಕೊಚ್ಚಿ ತಲುಪಿದ್ದಾರೆ. ತೆಲಂಗಾಣದಿಂದ ತನಿಖಾ ತಂಡ ಆಗಮಿಸಿದ ಬಳಿಕ ಪ್ರಕರಣದ ಮುಂದಿನ ವಿಚಾರಣೆ ಆರಂಭವಾಗಲಿದೆ.