HEALTH TIPS

ಪೆರಡಾಲ ನವಜೀವನ ಶಾಲೆಯಲ್ಲಿ ಪಕ್ಷಿವೀಕ್ಷಣಾ ಶಿಬಿರ

                   ಬದಿಯಡ್ಕ: ಪ್ರಕೃತಿಯಲ್ಲಿ ವಾಸಿಸುವ ಸಕಲ ಜೀವಜಾಲಗಳೂ ಒಂದಕ್ಕೊಂದು ಪೂರಕವಾಗಿ ಜೀವನವನ್ನು ನಡೆಸುತ್ತವೆ. ಕಾಡನ್ನು ನಾಶಮಾಡದೆ ನಮ್ಮ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಸಿದ್ಧ ಪಕ್ಷಿ ತಜ್ಞ, ಉರಗತಜ್ಞ ಹಾಗೂ ಪರಿಸರ ಹೋರಾಟಗಾರರಾದ ರಾಜು ಕಿದೂರು ಅಭಿಪ್ರಾಯಪಟ್ಟರು.

              ಪೆರಡಾಲ ನವಜೀವನ ಶಾಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದ ಪಕ್ಷಿ ವೀಕ್ಷಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿ  ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. 


             ಪಕ್ಷಿ ವೀಕ್ಷಣೆಯ ಸಂದಭರ್À ಪಾಲಿಸಬೇಕಾದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಸ್ವರಗಳ ಮೂಲಕ ಅವುಗಳನ್ನು ಅರಿಯುವ ವಿಧಾನಗಳನ್ನು ತಿಳಿಸಿದರು. ನಮ್ಮ ದೇಶದ ತಳಿಯಾದ ಸ್ಪೋಲ್ಟೆಡ್ ಡೋವ್ ಸಂತತಿ ಕಡಿಮೆಯಾಗಿ ಅದರಿಂದ ಕೃಷಿಯಲ್ಲುಂಟಾಗುವ ಹಾನಿಯನ್ನು ತಿಳಿಸಿದರು. ಕೃಷಿಗೆ ಉಪದ್ರವಕಾರಿ ಕೀಟಗಳನ್ನು ನಿಯಂತ್ರಿಸುವ ಇತರ ಹಕ್ಕಿಗಳನ್ನೂ ಪರಿಚಯಿಸಿದರು. ಪ್ರಕೃತಿಯಲ್ಲಿ ಅವುಗಳ ಇರುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತರು. ಪಕ್ಷಿಗಳು ಸಂತಾನಾಭಿವೃದ್ಧಿಗಾಗಿಯೇ ಗೂಡನ್ನು ಕಟ್ಟುತ್ತವೆ. ಕೆಲವೊಂದು ಪಕ್ಷಿಗಳು ಒಮ್ಮೆ ಕಟ್ಟಿದ ಗೂಡನ್ನು ಹಲವು ಬಾರಿ ಉಪಯೋಗಿಸುತ್ತದೆ ಎಂದರು. 

                ಹಾರಿಕೊಂಡೇ ಆಹಾರ ತಿನ್ನುವ, ವಿಸರ್ಜಿಸುವ, ನಿದ್ರಿಸುವ ಹಕ್ಕಿ ಹಾಗೂ ಗ್ರೀನ್ ಬೀ ಈಟರ್‍ಗಳ ವಿಶೇಷತೆಗಳನ್ನು ತಿಳಿಸಿದರು. ಶಾಲೆಯ ಪರಿಸರದ ಹೂದೋಟಕ್ಕೆ ತೆರಳಿ ಗ್ರೀನ್ ಬೀ ಈಟರ್‍ಗಳು ಆಹಾರ ಭೇಟೆಯಾಡಿ ಭಕ್ಷಿಸುವುದನ್ನು ವಿದ್ಯಾರ್ಥಿಗಳು ನೇರವಾಗಿ ಕಂಡು ಸಂತಸಪಟ್ಟರು. ಶಾಲಾ ಅಧ್ಯಾಪಿಕೆಯರಾದ ಕವಿತ, ಜ್ಯೋತ್ಸ್ನಾ, ಅಧ್ಯಾಪಕರು ಹಾಗೂ ಶಾಲೆಯ ಪರವಾಗಿ ವಿದ್ಯಾರ್ಥಿಗಳಾದ ಚಿನ್ಮಯಿ ಮತ್ತು ಶ್ರೀರಾಮ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries