ಬದಿಯಡ್ಕ: ಕಲೆ, ಸಾಂಸ್ಕøತಿಕತೆಗÀಳಿರುವ ಜಾಗದಲ್ಲಿ ಕಲಾಪ, ದ್ವಂದ್ವಗಳಿಗೆ ಅವಕಾಶವಿರುವುದಿಲ್ಲ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾಣಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ತಮ್ಮ ಪೀಠಾರೋಹಣದ ತೃತೀಯ ವರ್ಷಾಚರಣೆ ಅಂಗವಾಗಿ ಶ್ರೀಮಠದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನಿಡಿದರು.
ಹಿರಿಯ ವಿದ್ವಾಂಸರನ್ನು ಒಟ್ಟುಸೇರಿಸಿ ನಡೆಸುವ ಕಾರ್ಯಕ್ರಮಗಳೇ ನಿಜವಾದ ಸಂಭ್ರಮವಾಗಿದೆ. ಶ್ರೀ ಎಡನೀರು ಮಠ ಹಿಂದಿನಿಂದಲೂ ಕಲೆಗೆ ಆದ್ಯತೆ ನೀಡುತ್ತಾ ಬಂದಿದೆ. ಪೀಠಾರೋಹಣದ ತೃತೀಯ ವರ್ಷಾಚರಣೆಯನ್ನು ವಿದ್ವಾಂಸರೊಂದಿಗೆ ಸೇರಿ ನಡೆಸಬೇಕೆಂಬ ಆಶಯದಂತೆ ಕಾರ್ಯಕ್ರಮ ನಡೆಸಲಾಗಿದೆ. ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಗೌರವಾರ್ಪೆಣೆ ಸಲ್ಲಿಸುವ ಪರಂಪರೆಯನ್ನು ಶ್ರೀ ಮಠದ ಯತಿಶ್ರೇಷ್ಠರು ಮುನ್ನಡೆಸಿಕೊಂಡು ಬಂದಿದ್ದು, ಮುಂದೆಯೂ ನಿರಂತರವಾಗಿ ನಡೆಯಲಿರುವುದಾಗಿ ತಿಳಿಸಿದರು.
ಸಾಹಿತಿ, ಖ್ಯಾತ ಶಿಕ್ಷಣ ತಜ್ಞ ಕೆ.ಇ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಧರ್ಮ ವಿಭಿನ್ನ ಪರಂಪರೆಯನ್ನು ಹೊಂದಿದ ಸಮನ್ವಯತೆಯ ಮೂಲವಾಗಿದೆ. ಎಲ್ಲವನ್ನೂ ಒಪ್ಪಿಕೊಂಡು-ಅಪ್ಪಿಕೊಂಡು ಪ್ರಾಜ್ವಲ್ಯಮಾನವಾಗಿರುವ ಹಿಂದೂ ಧರ್ಮ ಸಮಾನತೆಯನ್ನು ಸಾರಿದ ಧರ್ಮವಾಗಿದೆ. ಈ ಆಶಯವನ್ನು ಮೈಗೂಡಿಸಿಕೊಂಡಿರುವ ಶ್ರೀ ಎಡನೀರು ಮಠ ಸಮಾಜದ ಎಲ್ಲ ಜನರನ್ನು ಸಮಾನವಾಗಿ ಪರಿಗಣಿಸುವುದರ ಜತೆಗೆ ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವ ಕೇಂದ್ರವಾಗಿ ಬೆಳೆದು ನಿಂತಿದೆ. ಸಮಜ ಎದುರಿಸುತ್ತಿರುವ ಅನೆಕ ಸಮಸ್ಯೆಗಳಿಗೆ ಶ್ರೀ ಎಡನೀರು ಮಠ ಉತ್ತರದಾಯಿಯಾಗಿ ನಮ್ಮ ಮುಂದಿರುವುದಾಗಿ ತಿಳಿಸಿದರು.
ಈ ಸಂದರ್ಭ ಹಿರಿಯ ನೃತ್ಯಗುರು ಮೋಹನ್ ಕುಮಾರ್ ಉಳ್ಳಾಲ್ ಅವರನ್ನು ಸ್ವಾಮೀಜಿ ಗೌರವಿಸಿದರು. ಖ್ಯಾತ ಯಕ್ಷಗಾನ ಕಲಾವಿದ ಪ್ರೊ. ಎಂ.ಎಲ್ ಸಾಮಗ ಅಭಿನಂದನಾ ಭಾಷಣ ಮಾಡಿದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಷ್ಯವೃಂದ ಮಾನ್ಯ ಇವರ ವತಿಯಿಂದ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅವರಿಗೆ ಗೌರವಾರ್ಪಣೆ ನಡೆಯಿತು.. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಪುತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಕಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯನಾರಾಯಣ ಭಟ್ ಎಡನೀರು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಭಜನಾ ಸಂಕೀರ್ತನ ಮಂಗಳೂರು ವತಿಯಿಂದ ಭಜನಾ ಸತ್ಸಂಗ, ಮಧ್ಯಾಹ್ನ ಕರ್ನಾಟಕ ಕಲಾಶ್ರೀ, ವಿದುಷಿ ರಾಜಶ್ರೀ ಉಳ್ಳಾಲ್ ಅವರ ಶಿಷ್ಯರಿಂದ ನೃತ್ಯ ನಮನ, ಸಂಜೆ 'ಗದಾ ಯುದ್ಧ'ಯಕ್ಷಗಾನ ಬಯಲಾಟ ನಡೆಯಿತು.