ಕುಂಬಳೆ: ಬದಿಯಡ್ಕ ನಿವಾಸಿ, ಮಾಹಿತಿ ಹಕ್ಕು ಕಾರ್ಯಕರ್ತ ಕುಂಬಳೆಯ ಕಂಚಿಕಟ್ಟೆಯ ದುಗಮಬಾ ರಸ್ತೆಯಲ್ಲಿ ವಆಸಿಸುತ್ತಿದ್ದ ಸುಬ್ರಹ್ಮಣ್ಯ ನಾಯಕ್(65)ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ಮನೆಯಲ್ಲಿ ಎದೆನೋವು ಕಾಣಿಸಿಕೊಮಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ಸಂಸ್ಕøತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಆರ್‍ಟಿಐ ಕಾರ್ಯಕರ್ತರಾಗಿದ್ದ ಇವರು ಭ್ರಷ್ಟಾಚಾರಕ್ಕೆದುರಾಗಿ ನಿರಂತರ ತಮ್ಮ ಹೋರಾಟ ನಡೆಸಿಕೊಂಡು ಬರುತ್ತಿದ್ದ ಇವರು ರಾಜಕೀಯದವರಿಗೆ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಘಿದ್ದರು. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಇವರಿಗೆ ಜೀವಬೆದರಿಕೆ, ಆಕ್ರಮಣವನ್ನೂ ಎದುರಿಸಬೇಕಾಗಿ ಬಂದಿತ್ತು. ಅವರು ಪತ್ನಿಯನ್ನು ಅಗಲಿದ್ದಾರೆ.