ಕೊಚ್ಚಿ: ಎಲ್.ಎಲ್. ಬಿ. ತೇರ್ಗಡೆಯಾದ ವಿದ್ಯಾರ್ಥಿಗೆ ವಿಶ್ವವಿದ್ಯಾನಿಲಯವು ಎಲ್. ಎಲ್. ಎಂ. ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಕೊಚ್ಚಿ ಕುಸಾಟ್‍ನಿಂದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್‍ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗೆ ಪದವಿ ಪ್ರಮಾಣಪತ್ರದ ಬದಲಿಗೆ ಸ್ನಾತಕೋತ್ತರ ಪ್ರಮಾಣಪತ್ರವನ್ನು ನೀಡಲಾಗಿದೆ.
ಆದರೆ ಹತ್ತು ವರ್ಷಗಳ ನಂತರ ವಿದ್ಯಾರ್ಥಿ ಮತ್ತು ವಿಶ್ವವಿದ್ಯಾನಿಲಯಕ್ಕೆ ಈ ವಿಷಯ ತಿಳಿದುಬಂದಿದ್ದು ಮತ್ತೊಂದು ಅಚ್ಚರಿ ಎನಿಸಿದೆ.
ಇತ್ತೀಚೆಗೆ ಉದ್ಯೋಗಕ್ಕಾಗಿ ಪ್ರಮಾಣಪತ್ರ ಸಲ್ಲಿಸಿದಾಗ ವಿದ್ಯಾರ್ಥಿನಿ ಈ ಮಾಹಿತಿ ತಿಳಿದುಕೊಂಡಿದ್ದಾಳೆ. ದಾಖಲೆಗಳನ್ನು ಪರಿಶೀಲಿಸಿದ ಪ್ಲೇಸ್ ಮೆಂಟ್ ಏಜೆನ್ಸಿಯು ಪ್ರಮಾಣಪತ್ರದಲ್ಲಿನ ತಪ್ಪನ್ನು ವಿದ್ಯಾರ್ಥಿಗೆ ತಿಳಿಸಿತು. ಈ ತಪ್ಪನ್ನು ಸರಿಪಡಿಸಲು ವಿಶ್ವವಿದ್ಯಾಲಯದ ಮೊರೆ ಹೋದಾಗ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ಬಂದಿತೆನ್ನಲಾಗಿದೆ.
2013ರಲ್ಲಿ ವಿದ್ಯಾರ್ಥಿನಿ ಎಲ್ ಎಲ್ ಬಿ ಪಾಸಾಗಿದ್ದಳು. ಆದರೆ ಈ ವಿದ್ಯಾರ್ಥಿಯೊಂದಿಗೆ ಇತರ ಯಾವುದೇ ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳಲ್ಲಿ ಈ ರೀತಿಯ ದೋಷವನ್ನು ಹೊಂದಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳುತ್ತಾರೆ. ಇಂತಹ ಪ್ರಮಾದ ಹೇಗಾಯಿತು ಎಂದು ತನಿಖೆ ನಡೆಸುವಂತೆ ಉಪಕುಲಪತಿ ಆದೇಶಿಸಿರುವರು.