ಎರ್ನಾಕುಳಂ: ಕಲಮಸ್ಸೆರಿಯ ಸಾಮ್ರಾ ಇಂಟರ್‍ನ್ಯಾಶನಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ವಿರುದ್ಧ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.
ಯುಎಪಿಎ ಜೊತೆಗೆ, ಮಾರ್ಟಿನ್ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸ್ಫೋಟಕ ನಿಷೇಧ ಕಾಯ್ದೆ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಎಫ್‍ಐಆರ್ ವರದಿಯಲ್ಲಿ ಸ್ಫೋಟವು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಹೇಳುತ್ತದೆ. ಶಂಕಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯ ಮನೆಯಲ್ಲಿ ಟೂಲ್ ಬಾಕ್ಸ್ ಪತ್ತೆಯಾಗಿದೆ. ಮಾರ್ಟಿನ್ ಬೆಳಿಗ್ಗೆ 5:00 ಗಂಟೆಗೆ ಮನೆಯಿಂದ ಹೊರಟರು ಎಂದು ಅವರ ಪತ್ನಿ ಪೋಲೀಸರಿಗೆ ತಿಳಿಸಿದ್ದಾರೆ.
ಇದೇ ವೇಳೆ ಕಲಮಸ್ಸೆರಿ ಸ್ಫೋಟದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತೊಡುಪುಳ ಮೂಲದ ಕುಮಾರಿ (53) ಮೃತಪಟ್ಟಿದ್ದಾರೆ. ಶೇ.90ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿದ್ದು, ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರೊಂದಿಗೆ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.