ಬದಿಯಡ್ಕ: ದೇವರ ಸೇವೆ ಮಾಡಲು ಜೀವನದಲ್ಲಿ ಲಭ್ಯವಾದ ಭಾಗ್ಯವನ್ನು ಸದುಪಯೋಗಪಡಿಸಿಕೊಂಡು ಭಕ್ತರು ತಮ್ಮ ಕಿಂಚಿತ್ ಸಮಯವನ್ನು ದೇವರ ಕೆಲಸಕ್ಕೆ ವಿನಯೋಗಿಸಬೇಕು. ದೇವರು ಸದಾ ಕಾಲ ನಮ್ಮನ್ನು ಸಂರಕ್ಷಿಸುತ್ತಾನೆ ಎಂದು ಉದ್ಯಮಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ತಿಳಿಸಿದರು.
ಪೆರಡಾಲ ಶ್ರೀಉದನೇಶ್ವರ ದೇವಾಲಯದ ಜೀರ್ಣೋದ್ದಾರ-ರಾಜಗೋಪುರ ಪುನಃ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯಮಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ವಸಂತ ಪೈ ಉಪಸ್ಥಿತರಿದ್ದು ಮಾತನಾಡಿ, ರಾಜಗೋಪುರ ನಿರ್ಮಾಣ ಕೆಲಸ ಆದಷ್ಟು ಶೀಘ್ರ ಮುಗಿಸಿ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮ ನಡೆದುಬರಲಿ ಎಂದು ನುಡಿದರು. ನಾವು ಮಾಡುವ ದೇವರ ಸೇವೆ ನಮ್ಮ ಶ್ರಮ ಮಾತ್ರ ಅದು ದೇವರ ಇಚ್ಛೆಯಂತೆ ನಡೆಯುತ್ತದೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಟ್ರಸ್ಟಿ ಜಗನ್ನಾಥ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಆಡಳಿತ ಮಂಡಳಿ ಸದಸ್ಯರಾದ ಜಗದೀಶ ಪೆರಡಾಲ, ಕೃಷ್ಣನ್ ಬದಿಯಡ್ಕ, ಸಮಿತಿ ಪದಾಧಿಕಾರಿಗಳಾದ ಸತೀಶ ಪುದ್ಯೋಡು, ಭಾಸ್ಕರ ಬಿ, ಗಣೇಶ ಭಟ್, ಅರವಿಂದ ಭಟ್ ಈಳಂತೋಡಿ, ಅರ್ಚಕ ವೃಂದ ಸಿಬ್ಬಂದಿ ವರ್ಗ, ಸರ್ವ ಸಮಿತಿ ಸದಸ್ಯರು, ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮನ ಭಟ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ವಂದಿಸಿದರು.