ಬದಿಯಡ್ಕ: ಪೆರಡಾಲ ನವಜೀವನ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಅತಿಥೇಯ ನವಜೀವನ ಶಾಲೆಯು 631 ಅಂಕಗಳೊಂದಿಗೆ ಪ್ರಥಮಸ್ಥಾನದಲ್ಲಿ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದೆ. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ 533 ಅಂಕಗಳೊಂದಿಗೆ ದ್ವಿತೀಯ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಪ್ರೌಢಶಾಲೆ 427 ಅಂಕಗಳೊಂದಿಗೆ ತೃತೀಯ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ 427 ಹಾಗೂ ಕಾರಡ್ಕ 427 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ.