ಕುಂಬಳೆ: ಚೇವಾರು ಸಮೀಪದ ಕುಡಾಲುಮೆರ್ಕಳ ಪಿಬಿಎಂ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಕಲೋತ್ಸವ ಇತ್ತೀಚೆಗೆ ಜರಗಿತು. ಕಲೋತ್ಸವವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮನಾಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಮುಖ್ಯ್ಯೊಪಾಧ್ಯಾಯ ಅಬ್ದುಲ್ ಖಾದರ್, ಮೊಯ್ದು ಕುಟ್ಟಿ ಮಾಸ್ತರ್, ಟಾಸ್ಕ್ ಅಧ್ಯಕ್ಷ ಪ್ರಕಾಶ್ ರೈ, ಕಲೋತ್ಸವದ ಅಧ್ಯಕ್ಷ ಸಂತೋμï ಕೆ.ವಿ. ಮೊಯ್ದೀನ್ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಂಬೂದಿರಿ ಸ್ವಾಗತಿಸಿ, ಪಾರ್ವತಿ ಟೀಚರ್ ಪ್ರಾರ್ಥನೆ ಹಾಡಿದರು. ವಸಂತ ಮಾಸ್ತರ್ ವಂದಿಸಿದರು.