ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹209 ಹೆಚ್ಚಿಸಲಾಗಿದೆ.
ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹209 ಹೆಚ್ಚಿಸಲಾಗಿದೆ.
ಈ ಮೂಲಕ ಪರಿಸ್ಕೃತ ದರ ದೆಹಲಿ ಮಾರುಕಟ್ಟೆಯಲ್ಲಿ 1,731 ಕ್ಕೆ ಲಭ್ಯವಾಗುತ್ತದೆ.
ಈ ಮೂಲಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಜುಲೈನಿಂದ ಸತತ ನಾಲ್ಕು ತಿಂಗಳೂ ಹೆಚ್ಚಳ ಮಾಡಿದಂತಾಗಿದೆ.
ಭಾನುವಾರವಷ್ಟೇ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಶೇ 5 ರಷ್ಟು ಹೆಚ್ಚಳ ಮಾಡಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಮಾನದಂಡಗಳಿಗನುಗುಣವಾಗಿ ಈ ಹೆಚ್ಚಳ ಆಗಿದೆ ಎಂದು ತೈಲ ನಿಗಮಗಳು ಹೇಳಿವೆ.