ನವದಹೆಲಿ: ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಭಾರತೀಯ ವಿದೇಶಾಂಗ ಸಚಿವಾಲಯ 24X7 ಸಹಾಯವಾಣಿ ಆರಂಭಿಸಿದೆ.
ನವದಹೆಲಿ: ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಭಾರತೀಯ ವಿದೇಶಾಂಗ ಸಚಿವಾಲಯ 24X7 ಸಹಾಯವಾಣಿ ಆರಂಭಿಸಿದೆ.
ದೆಹಲಿ, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮತ್ತು ಪ್ಯಾಲೆಸ್ಟೀನ್ ನಗರ ರಾಮಲ್ಲಾದಲ್ಲಿ ತುರ್ತು ಸಹಾಯವಾಣಿಯನ್ನು ಆರಂಭಿಸಿದೆ.
ಈ ಸಹಾಯವಾಣಿ ಕೊಠಡಿಗಳಿಂದ ಇಸ್ರೇಲ್‌ನಲ್ಲಿನ ಭಾರತೀಯರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ, ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸುವ ಕೆಲಸ ನಡೆಯಲಿದೆ.
ಸಹಾಯಕ್ಕಾಗಿ ದೆಹಲಿ ನಿಯಂತ್ರಣಾ ಕೊಠಡಿಗೆ 1800118797 (Toll free), +91-11 23012113, +91-11-23014104, +91-11-23017905 +919968291988. ಈ ನಂಬರ್‌ಗಳಿಗೆ ಕರೆ ಮಾಡಬಹುದು. ಅಲ್ಲದೆ situationroom@mea.gov.in. ಈ ವಿಳಾಸಕ್ಕೆ ಇ ಮೇಲ್ ಕಳುಹಿಸಬಹುದಾಗಿದೆ.
ಇನ್ನು ಟೆಲ್ ಅವೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ 24X7 ಸಹಾಯವಾಣಿ ಆರಂಭಿಸಿದ್ದು, +97235226748, +972-543278392 ಸಂಖ್ಯೆಗೆ ಕರೆ ಮಾಡಬಹುದು ಅಥವಾ cons1.telaviv@mea.gov.in. ಈ ವಿಳಾಸಕ್ಕೆ ಇ ಮೇಲ್ ಕಳುಹಿಸಬಹುದಾಗಿದೆ.
ರಾಮಲ್ಲಾವನ್ನು ಸಂಪರ್ಕಿಸಬೇಕಾದರೆ +970-592916418 ಸಂಖ್ಯೆಗೆ ಕರೆ ಅಥವಾ ವಾಟ್ಸ್‌ಆ‍್ಯಪ್ ಮೂಲಕವೂ ಸಂಪರ್ಕಿಸಬಹುದು ಅಥವಾ rep.ramallah@mea.gov.in ಈ ವಿಳಾಸಕ್ಕೆ ಇ ಮೇಲ್‌ನ್ನೂ ಕಳುಹಿಸಬಹುದು ಎಂದು ಮಾಹಿತಿ ಹಂಚಿಕೊಂಡಿದೆ.
ಸುಮಾರು 18 ಸಾವಿರ ಭಾರತೀಯರು ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಅವರಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.