ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರ ಅಡೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬಲಭಾಗದಲ್ಲಿ ನಿರ್ಮಿಸುತ್ತಲಿರುವ ಶ್ರೀ ಮಹಾವಿಷ್ಣು ದೇವರ ಗುಡಿಗೆ ಶುಭ ಮುಹೂರ್ತದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಮಂಗಳವಾರ ನಿಧಿಕುಂಭ ಸ್ಥಾಪನೆ ನೆರವೇರಿಸಿದರು.
ಶ್ರೀ ಕ್ಷೇತ್ರದ ತಂತ್ರಿವರ್ಯ ವಾಸುದೇವ ತಂತ್ರಿ ಕುಂಟಾರು, ಬ್ರಹ್ಮಶ್ರೀ ಶ್ರೀಧರ ತಂತ್ರಿ ಮತ್ತು ಪವಿತ್ರಪಾಣಿ ರಾಧಾಕೃಷ್ಣ ಭಾರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.