ಮಧೂರು: ಜೀರ್ಣೋದ್ದಾರ-ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿರುವ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ದೇವಾಲಯದ ಸಮಗ್ರ ಕಾಮಗಾರಿಯ ವೀಕ್ಷಣೆಗೆ ಬುಧವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಅವಲೋಕನ ನಡೆಸಿದರು. ಈ ಸಂದರ್ಭ ದಾನಿ, ಸಂಘಟಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಜೊತೆಗಿದ್ದರು. ಶ್ರೀಕ್ಷೇತ್ರ ನವೀಕರಣ ಸಮಿತಿ ಪದಾಧಿಕಾರಿಗಳು, ಕ್ಷೇತ್ರದ ವಿವಿಧ ಪ್ರಮುಖರು ಉಪಸ್ಥಿತರಿದ್ದರು.