ಅಹಮದಾಬಾದ್ (PTI): ಕೇಂದ್ರ ಗೃಹ ಸಚಿವ ಮತ್ತು ಗಾಂಧಿನಗರ ಸಂಸದ ಅಮಿತ್ ಶಾ ಅವರು ತಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳೊಂದಿಗೆ ಶನಿವಾರ ಸಂವಾದ ನಡೆಸಿದರು.
ಅಹಮದಾಬಾದ್ (PTI): ಕೇಂದ್ರ ಗೃಹ ಸಚಿವ ಮತ್ತು ಗಾಂಧಿನಗರ ಸಂಸದ ಅಮಿತ್ ಶಾ ಅವರು ತಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳೊಂದಿಗೆ ಶನಿವಾರ ಸಂವಾದ ನಡೆಸಿದರು.
ಬಳಿಕ ಅವರು ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿದರು.
'ಕ್ಷೇತ್ರದ ಸಂಸದನಾಗಿ, ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಲಭ್ಯವಾಗುವ ಸೌಲಭ್ಯಗಳು ಅಂಗನವಾಡಿ ಮಕ್ಕಳಿಗೂ ಲಭ್ಯವಾಗುತ್ತಿವೆಯೇ ಎಂದು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇನೆ' ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.
'ನನ್ನ ಲೋಕಸಭಾ ಕ್ಷೇತ್ರದ ಅಂಗನವಾಡಿ ಕೇಂದ್ರಗಳ ಮಕ್ಕಳೊಂದಿಗೆ ಗೇಮಿಂಗ್ ವಲಯಕ್ಕೆ ತೆರಳಿದ್ದೆ. ಇಲ್ಲಿ ಮಕ್ಕಳು ಅವರ ಇಷ್ಟದ ಆಟಗಳನ್ನು ಆಡುತ್ತಾ ಖುಷಿಪಟ್ಟರು. ಮಕ್ಕಳ ಉಲ್ಲಾಸ ಕಂಡು ಹೃದಯ ತುಂಬಿ ಬಂತು. ಅಂಗನವಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಆಟಿಕೆಗಳನ್ನು ನೀಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.