ಕಾಸರಗೋಡು: ಜಿಲ್ಲಾ ಶಾಲಾ ಕ್ರೀಡಾಕೂಟ ಶುಕ್ರವಾರ ನೀಲೇಶ್ವರ ಇಎಂಎಸ್ ಕ್ರೀಡಾಂಗಣದಲ್ಲಿ ಆರಂಭಗೊಮಡಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಮಡಿಕೈ ಗ್ರಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಏಷ್ಯನ್ ಯೂತ್ ಚಾಂಪಿಯನ್‍ಶಿಪ್ ಮತ್ತು ಕಾಮನ್‍ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ ವಿ.ಎಸ್.ಅನುಪ್ರಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಕ್ಕಾಡ್ ಜಿಎಚ್ ಎಸ್ ಎಸ್ ಕ್ಯಾಪ್ಟನ್ ಪಿ.ಕೃಷ್ಣಜಿತ್ ಪ್ರಮಾಣ ವಚನ ಬೋಧಿಸಿದರು.
ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಮಡಿಕೈ ಗ್ರಾಪಂ ಉಪಾಧ್ಯಕ್ಷ ವಿ.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಮಾ ಪದ್ಮನಾಭನ್, ಗ್ರಪಂ ಸದಸ್ಯೆ ವಿ.ರಾಧಾ, ಜಿಲ್ಲಾ ಕ್ರೀಡಾ ಸಂಯೋಜಕ ಕೆ.ಮಧುಸೂದನನ್, ಜಿಲ್ಲಾ ಕ್ರೀಡಾ ಪರಿಷತ್ ಸದಸ್ಯ ಅನಿಲ್ ಬಂಗಳಂ, ಕಾಕತ್ ಜಿ.ಎಚ್.ಎಸ್.ಎಸ್.ತಾ.ಪಂ.ಅಧ್ಯಕ್ಷ ಕೆ.ವಿ.ಮಧು, ಶಾಲಾ ಮುಖ್ಯ ಶಿಕ್ಷಕಿ ಟಿ.ವಿ.ಸುಚಿನಾ ಲಕ್ಷ್ಮಿ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಪ್ರಧಾನ ಸಂಚಾಲಕ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಎನ್.ನಂದಿಕೇಶನ್ ಸ್ವಾಗತಿಸಿದರು. ಕಕ್ಕಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎಂ.ಮನೋಜ್ ಕುಮಾರ್ ವಂದಿಸಿದರು.
ಇಂದು ಸಮಾರೋಪ:
ಜಿಲ್ಲೆಯ ಏಳು ಶೈಕ್ಷಣಿಕ ಉಪಜಿಲ್ಲೆಗಳಿಂದ ಆರು ವಿವಿಧ ವಿಭಾಗಗಳಲ್ಲಾಗಿ 1500ಮಂದಿ ಕ್ರೀಡಾಳುಗಳು 86 ವಿಧದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಕ್ಕಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯು ಕ್ರಿಡಾಕೂಟ ಆಯೋಜಿಸುತ್ತಿದೆ. ಅ.14ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಸಚಿವ ಅಹ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸುವರು. ಅ. 16ರಿಂದ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟ ತ್ರಿಶ್ಯೂರ್‍ನಲ್ಲಿ ಜರುಗಲಿರುವುದು.