HEALTH TIPS

ಕಾರ್ಯಂಕೋಟ್ಟು ನದಿಯಲ್ಲಿ ಸಂಭ್ರಮದ ಕಯಾಕಿಂಗ್ ಕಾರ್ಯಾಗಾರ

 

      

                  ಕಾಸರಗೋಡು: ತುಂಬಿ ಹರಿಯುವ ಹೊಳೆಗಳಲ್ಲಿ, ಧುಮ್ಮಿಕ್ಕುವ ತೊರೆಗಳಲ್ಲಿ ಕಯಾಕಿಂಗ್‍ಗಳನ್ನು ಪ್ಯಡೆಲ್ ಮಾಡುವ ಹಾಗೂ ಚಲಾಯಿಸುವ ವಿಧಾನದ ಬಗ್ಗೆ ತರಬೇತಿ ಕಾರ್ಯಾಗಾರ  ಕಯ್ಯೂರು ಕಯಾಕಿಂಗ್ ಪಾರ್ಕ್‍ನ ಕಾರ್ಯಂಗೋಡ್ ಹೊಳೆಯಲ್ಲಿ ಜರುಗಿತು.

            ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ, ಅಸಾಪ್ ಕೇರಳದ ಸಮುದಾಯ ಸ್ಕ್ಯಾನ್ ಪಾರ್ಕ್, ರಾಜ್ಯ ಸರ್ಕಾರದ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಮತ್ತು ಕಾಸರಗೋಡು ಜಿಲ್ಲಾ ಪ್ರವಾಸೋದ್ಯಮ ಅಬಿವೃದ್ಧಿ ನಿಗಮ ಸಹಯೋಗದಲ್ಲಿ ಯಂಗ್ ವಿಂಡ್ ಎಂಬ ಸಾಹಸ ಕಂಪನಿಯ ಸಹಾಯದಿಂದ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಯಾಕಿಂಗ್ ತರಬೇತಿ ಆಯೋಜಿಸಲಾಗಿತ್ತು. ಕಯಾಕಿಂಗ್‍ನ ಸಾಹಸ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಅದರ ಪ್ರವಾಸೋದ್ಯಮ ಸಾಮಥ್ರ್ಯವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗಿದೆ. ಎಂಟು ವರ್ಷ ಮೇಲ್ಪಟ್ಟವರಿಗೆ ತರಬೇತಿ ನೀಡಲಾಯಿತು. ಭಾಗವಹಿಸಿದ 16ಮಂದಿಯಲ್ಲಿ ಇಬ್ಬರು ಮಕ್ಕಳು ಮತ್ತು ಎಂಟು ಮಹಿಳೆಯರು ಒಳಗೊಂಡಿದ್ದಾರೆ. ಸಾಹಸ ಕಯಾಕಿಂಗ್ ನಿಯಂತ್ರಣ, ಪೆಡ್ಲಿಂಗ್, ವಿರುದ್ಧ ಭಾಗಕ್ಕೆ ತಿರುಗಿಸುವ ವಿಧಾನ, ತುರ್ತು ರಕ್ಷಣಾ ಮತ್ತು ಅಂತಾರಾಷ್ಟ್ರೀಯ ಕಯಾಕಿಂಗ್ ಅಭ್ಯಾಸಗಳು ಕಾರ್ಯಾಗಾರದಲ್ಲಿ ಒಳಗೊಂಡಿತ್ತು. 

            ಕಾರ್ಯಾಗಾರದಲ್ಲಿ ಭಾಗವಹಿಸುವವರು ಸಾಹಸ ಕಯಾಕಿಂಗ್‍ಗೆ ಅಗತ್ಯವಾದ ಪಾಠಗಳು, ಸುರಕ್ಷತಾ ಸಾಧನಗಳ ಬಳಕೆ ಮತ್ತು ವೃತ್ತಿಪರತೆ ಬಗ್ಗೆ ತಿಳಿದಿರಬೇಕಾಗಿದೆ.  ಗೋವಾದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋಟ್ರ್ಸ್ ತರಬೇತುದಾರ ಅಶೋಕ್ ಅವರ ಮಾರ್ಗದರ್ಶನದಲ್ಲಿ ತರಬೇಥಿ ನೀಡಲಯಿತು.  ಬೆಳಿಗ್ಗೆ 7 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಎರಡು ತರಬೇತಿಯನ್ನು ಹಂತಹಂತವಾಗಿ ಆಯೋಜಿಸಲಾಗಿತ್ತು. ಪಾಲಾಯಿ, ನೀಲಾಯಿ ಹಾಗೂ ಕೂಕೋಟ್ ಪ್ರದೇಶದ ಕಾರ್ಯಂಗೊಡು ಹೊಳೆಯ ಎರಡೂ ಬದಿಗಳಲ್ಲಿ ವಿವಿಧ ಸಣ್ಣ ದೋಣಿಗಳಲ್ಲಿ ಪ್ಯಾಡಲ್ ಮಾಡಲು ಅವಕಾಶವನ್ನು ಒದಗಿಸಲಾಗಿತ್ತು. ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries