ಕಾಸರಗೋಡು ಶಾಲೆಯೊಂದರಲ್ಲಿ ಅಧ್ಯಾಪಕರಾಗಿರುವ ರೆಹಮಾನ್ ಎಂಬುವವರ ಮನೆಯಲ್ಲಿ ದರೋಡೆ ಯತ್ನ ನಡೆದಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮನೆಯೊಳಗಡೆ ಬಟ್ಟೆಗಳನ್ನು ಎಳೆದು ಕೆಳಗೆ ಎಸೆದಿರುವುದು ಕಂಡುಬಂದಿದೆ. ಈ ಮನೆಯಲ್ಲಿ ಯಾವುದೇ ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳನ್ನು ಇರಿಸದಿದ್ದುದರಿಂದ ಕಳ್ಳನಿಗೆ ಏನೂ ಲಭಿಸಿಲ್ಲ. ಅಧ್ಯಾಪಕ ಮತ್ತು ಅವರ ಕುಟುಂಬದ ಮೂಲಮನೆ ಇದಾಗಿದ್ದು, ವಾರಕ್ಕೊಮ್ಮೆ ಮಾತ್ರ ಅವರಿಲ್ಲಿಗೆ ಆಗಮಿಸುತ್ತಾರೆ. ಇದೇ ಮನೆಯಲ್ಲಿ ಈ ಹಿಂದೆ ದರೋಡೆ ಯತ್ನ ನಡೆದಿದ್ದರಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದರ ಹಾರ್ಡ್ ಡಿಸ್ಕ್ ಅನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿತ್ತು. ಈ ಹಾರ್ಡ್ ಡಿಸ್ಕ್ ನ್ನು ಇದೀಗ ಕಳ್ಳರು ಕದ್ದೊಯ್ದಿದ್ದಾರೆ. ಶಿಕ್ಷಕರ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.