HEALTH TIPS

ಪ್ಯಾಲೆಸ್ತೀನ್​ ಪರ ನಡೆದ ಸಮಾವೇಶ ಉದ್ದೇಶಿಸಿ ಹಮಾಸ್​ ನಾಯಕ ಭಾಷಣ: ವಿವಾದ ಸ್ಫೋಟ

               ತಿರುವನಂತಪುರಂ: ಅಕ್ಟೋಬರ್​ 7 ರಂದು ಇಸ್ರೇಲ್​ ಮೇಲೆ ರಾಕೆಟ್​​ ದಾಳಿ ಮಾಡಿ ಯುದ್ಧಕ್ಕೆ ಮುನ್ನುಡಿ ಬರೆದ ಪ್ಯಾಲೆಸ್ತೀನ್​​ನ ಹಮಾಸ್​ ಉಗ್ರ ಸಂಘಟನೆಯ ನಾಯಕರೊಬ್ಬರು ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ 'ಸಾಲಿಡಾರಿಟಿ ಯೂತ್​ ಮೂವ್ಮೆಂಟ್​' ಆಯೋಜಿಸಿದ್ದ ಸಮಾವೇಶದಲ್ಲಿ ವರ್ಚುವಲ್​ ಆಗಿ ಪಾಲ್ಗೊಂಡು ಮಾತನಾಡಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ.

           ಈ ಸಾಲಿಡಾರಿಟಿ ಯೂತ್​ ಮೂವ್ಮೆಂಟ್​, ಜಮಾತ್​​ ಇ ಇಸ್ಲಾಮಿ ಸಂಘಟನೆಯ ಯುವ ಸಂಘಟನಾ ವಿಭಾಗವಾಗಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹಮಾಸ್​ ನಾಯಕ ಖಲೀದ್​ ಮಸ್ಹಾಲ್​, ಯುವಕರನ್ನು ಉದ್ದೇಶಿಸಿ ಮಾತನಾಡಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ.

               ಖಲೀದ್​ ಮಸ್ಹಾಲ್ ವರ್ಚುವಲ್​ ಆಗಿ​ ಮಾತನಾಡಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್​ ಖಂಡಿಸಿದ್ದಾರೆ. ಅಲ್ಲದೆ, ಕೇರಳ ಪೊಲೀಸರಿಗೆ ಪ್ರಶ್ನೆ ಮಾಡಿರುವ ಸುರೇಂದ್ರನ್, ಕಾರ್ಯಕ್ರಮ ಆಯೋಜಕರ ವಿರುದ್ಧ​ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.


                  ಮಲಪ್ಪುರಂನಲ್ಲಿ ನಡೆದ ಐಕ್ಯತೆ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಸ್ಹಾಲ್​ ಅವರ ವಾಸ್ತವ ಭಾಷಣವು ಆತಂಕಕಾರಿಯಾಗಿದೆ. ಪಿಣರಾಯಿ ವಿಜಯನ್​ ಅವರ ಕೇರಳ ಪೊಲೀಸರು ಎಲ್ಲಿದ್ದಾರೆ? ಪ್ಯಾಲೆಸ್ತೀನ್​ ಉಳಿಸಿ ಎಂಬ ಸೋಗಿನಲ್ಲಿ ಉಗ್ರ ಸಂಘಟನೆ ಹಮಾಸ್​ ಅನ್ನು ವೈಭವೀಕರಿಸುತ್ತಿದ್ದಾರೆ ಮತ್ತು ಅವರ ನಾಯಕನ್ನು ಯೋಧನೆಂದು ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಸ್ವೀಕಾರ್ವಲ್ಲ ಎಂದು ಸುರೇಂದ್ರನ್​ ಎಕ್ಸ್​ ಮೂಲಕ ಖಂಡನೆ ಮಾಡಿದ್ದಾರೆ.

                ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಲೋಕಸಭಾ ಸಂಸದ ಶಶಿ ತರೂರ್​ ಅವರನ್ನು ಕೇರಳ ಬಿಜೆಪಿ ಘಟಕ ಟೀಕಿಸಿದೆ. ಪ್ಯಾಲೆಸ್ತೀನ್​ ಬೆಂಬಲಿಸಿರುವ ಯೂನಿಯನ್​ ಮುಸ್ಲಿಂ ಲೀಗ್​ ಸಮಾವೇಶದಲ್ಲಿ ತರೂರ್​ ಭಾಗವಹಿಸಿದ್ದಕ್ಕೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

                ಇಸ್ರೇಲ್​ ಜತೆಗಿನ ಯುದ್ಧದಲ್ಲಿ ಹಾನಿಗೊಳಗಾದ ಪ್ಯಾಲೆಸ್ತೀನ್ ಜನರ ಪರ ಸಾವಿರಾರು ಐಯುಎಂಎಲ್ ಬೆಂಬಲಿಗರು ಕೋಯಿಕ್ಕೋಡ್‌ನ ಬೀದಿಗಿಳಿದು ಬೆಂಬಲ ಸೂಚಿಸಿದ ಒಂದು ದಿನದ ನಂತರ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಹಮಾಸ್​-ಇಸ್ರೇಲ್​ ಸಂಘರ್ಷವನ್ನು ಬಳಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries