ಟೆಲ್‌ಅವಿವ್: ಇಸ್ರೇಲ್ ಸೈನ್ಯ ಮತ್ತು ಹಮಾಸ್ ಬಂಡುಕೋರರ ನಡುವೆ ಭೀಕರ ಯುದ್ಧ ಮುಂದುವರಿದಿದ್ದು, ದಕ್ಷಿಣ ಇಸ್ರೇಲ್ ನಲ್ಲಿ ಭೀಕರವಾಗಿದೆ. ಗಾಜಾದಿಂದ ಇಸ್ರೇಲ್ ಭೂಭಾಗಕ್ಕೆ ಹಮಾಸ್ ಉಗ್ರರು ನುಗ್ಗಿ ಬಂದು ಇಸ್ರೇಲ್ ಸೈನಿಕರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ.
ಹಮಾಸ್ ಅಟ್ಟಹಾಸಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೈನ್ಯ ರೊಚ್ಚಿಗೆದ್ದು ದೊಡ್ಡ ಸಂಖ್ಯೆಯಲ್ಲಿ ಗಾಜಾ ಮೇಲೆ ರಾಕೆಟ್ಗಳ ಸುರಿಮಳೆಗೈಯ್ಯುತ್ತಿದೆ. ಇದರ ನಡುವೆ ವಿಶ್ವದ ಅನೇಕ ದೇಶಗಳು ಇಸ್ರೇಲ್ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇದರ ಭಾಗವಾಗಿಯೇ ಅಮೆರಿಕಾ ವಿಮಾನವಾಹಕ ನೌಕೆ ಕಳೂಹಿಸಲು ನಿರ್ಧರಿಸಿದೆ.
ಯುದ್ಧನೌಕೆ ಜತೆಗೆ ಪೂರ್ವಮಧ್ಯೆ ಸಮುದ್ರಕ್ಕೆಫೋರ್ಡ್ ಕೆರಿಯರ್ ಸ್ಟ್ರೈಕ್ ಗ್ರೂಪ್ ಕಳೂಹಿಸಲು ಪೆಂಟಗನ್ ನಿಂದ ಆದೇಶ ಬಂದಿದೆ ಎಂದು ಅಮೆರಿಕಾ ಅಧಿಕಾರಿಗಳು ತಿಳಿಸಿದ್ದಾರೆ. 5ಸಾವಿರ ನಾವಿಕರು, ಯುದ್ಧ ವಿಮಾನಗಳೊಂದಿಗೆ ಕೂಡಿದ ದ ಯೂಎಸ್ ಎಸ್ ಆರ್ ಗೆರಾಲ್ಡ್ ಆರ್ ಫೋರ್ಡ್ ವಾಹಕ ನೌಕೆ, ಕ್ರೂಸ್, ಡಿಸ್ಟ್ರಾಯರ್ಸ್ಗಳನ್ನು ಕಳುಹಿಸಲಾಗುತ್ತಿದೆ. ಇದಕ್ಕೆ ಅಮೆರಿಕಾ ಅಧ್ಯಕ್ಷ ಜೋಬೈಡನ್ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವುದರ ಜತೆಗೆ ಹಮಾಸ್ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವವರ ಮೇಲೆ ಸಹ ಕಣ್ಣಿಡಲಿದೆ. ಈ ಯುದ್ಧ ನೌಕೆ ವಿನ್ಯಾಸ ಬದಲಾವಣೆಗಾಗಿ ಈ ಹಿಂದೆಯೇ ಈ ಪ್ರಾಂತ್ಯಕ್ಕೆ ಬಂದಿಳಿದಿತ್ತು. ಇದರ ಜತೆಗೆ ಕ್ರೋಜ್, ಡಿಸ್ಟ್ರಾಯರ್ಸ್, ರಾಂಪೇಜ್, ಕ್ಯಾರ್ನೀ, ರೂಜ್ವೆಲ್ಟ್ನೊಂದಿಗೆ ಎಫ್ 35, ಎಫ್ 15, ಎಫ್ 16, ಏ 10 ಯುದ್ಧ ವಿಮಾನಗಳು ಸೇರಿಕೊಂಡಿವೆ.
ಇನ್ನು ಇಸ್ರೇಲ್‌ಗೆ ಅಮೆರಿಕಾ ಬೆಂಬಲಿಸಿರುವುದಕ್ಕೆ ಟರ್ಕಿ ವಿರೋಧಿಸಿದೆ. ಇಸ್ರೇಲ್ ವಿಷಯದಲ್ಲಿ ಬೆಂಬಲಿಸಬಾರದೆಂದು ಕೋರಿದೆ. ಅನಗತ್ಯವಾಗಿ ಮಧ್ಯಪ್ರವೇಶಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಒಟ್ಟಾರೆ ಹೇಳುವುದಾದರೆ, ಮಧ್ಯಪ್ರಾಚ್ಯದಾದ್ಯಂತ ರಾಜಕೀಯ ಅನಿಶ್ಚಿತತೆ ಸೃಷ್ಟಿಸಿದೆ. 1,100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.