ಹೊಸ ತಲೆಮಾರಿನವರಲ್ಲಿ ಮಾದಕ ವಸ್ತುಗಳ ಬಳಕೆ ಗಣನೀಯವಾಗಿ ಹೆಚ್ಚಳಗೊಳ್ಳುತ್ತಿರುವುದು ಗೊತ್ತಿರುವ ವಿಷಯ. ಯುವಜನರನ್ನು ಗುರಿಯಾಗಿಸಿಕೊಂಡು ಮಾದಕವಸ್ತು ವ್ಯಾಪಾರವು ಪ್ರಪಂಚದಾದ್ಯಂತ ಹೆಚ್ಚು ಕೇಂದ್ರೀಕೃತವಾಗಿದೆ.
ಶಾಲಾ ಮಕ್ಕಳೂ ಇಂದು ಮಾದಕತೆಗೆ ಮಾರುಹೋಗಿ ಬದುಕನ್ನು ವ್ಯಸನದ ಗೂಡಾಗಿಸಿ ನಾಶದ ಹಾದಿ ತುಳಿಯುತ್ತಿರುವುದೂ ಆತಂಕಮೂಡಿಸಿದೆ. ಈ ರೀತಿ, ಕೊಕೇನ್ ಸೇರಿದಂತೆ ಮಾದಕ ವ್ಯಸನದಿಂದ ಜನರನ್ನು ತೊಡೆದುಹಾಕಲು ಹಲವಾರು ಔಷಧಿಗಳನ್ನು ಪ್ರಯತ್ನಿಸಲಾಗುತ್ತದೆ. ಈಗ, ವಿಜ್ಞಾನಿಗಳ ಗುಂಪು ಕೊಕೇನ್ ಚಟವನ್ನು ಕಡಿಮೆ ಮಾಡುವ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಬ್ರೆಜಿಲ್‍ನ ವಿಜ್ಞಾನಿಗಳು ಡ್ರಗ್ಸ್ ಬಳಕೆ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಲಸಿಕೆಗೆ "ಕ್ಯಾಲಿಕ್ಕೋಕಾ" ಎಂದು ಹೆಸರಿಸಲಾಗಿದೆ. ಪ್ರಾಣಿಗಳ ಪ್ರಯೋಗಗಳಲ್ಲಿ ಹೊಸ ಔಷಧವು ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿದೆ ಮತ್ತು ಕೊಕೇನ್ ಮೆದುಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇಮ್ಯುನೊಜೆನಿಕ್ ಕ್ಯಾಲಿಕ್ಸ್ಕೊಕಾ ಲಸಿಕೆಯು ರೋಗಿಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಬಹುದು. ಚಿಕಿತ್ಸೆಯನ್ನು ಅಂಗೀಕರಿಸಿದರೆ, ಕೊಕೇನ್ ವ್ಯಸನವನ್ನು ಲಸಿಕೆಯೊಂದಿಗೆ ಚಿಕಿತ್ಸೆ ನೀಡುವ ಮೊದಲನೆಯದು ಎಂದು ಔಷಧದ ಆವಿμÁ್ಕರದ ನೇತೃತ್ವ ವಹಿಸಿದ್ದ ಮಿನಾಸ್ ಗೆರೈಸ್‍ನ ಫೆಡರಲ್ ವಿಶ್ವವಿದ್ಯಾಲಯದ ಮನೋವೈದ್ಯ ಫ್ರೆಡೆರಿಕೊ ಗಾರ್ಸಿಯಾ ಹೇಳಿರುವರು.