ಕಾಸರಗೋಡು: ಸ್ವಾತಂತ್ರ್ಯದ ಅಮೃತಕಾಲದಲ್ಲಿ ಜೀವಿಸುವ ನಾವೆಲ್ಲರೂ ನಮ್ಮ ಜೀವನದ ಒಂದಷ್ಟು ಸಮಯವನ್ನು ರಾಷ್ಟ್ರ ನಿರ್ಮಾಣ ಕಾರ್ಯಗಳಿಗೆ ಮೀಸಲಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಣ್ಣೂರು ವಿಭಾಗ ಪ್ರಚಾರ ಪ್ರಮುಖ್ ಕೆ.ಸಿ ಶೈಜು ತಿಳಿಸಿದ್ದಾರೆ.
ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾಸರಗೋಡು ಗ್ರಾಮಾಂತರ ಖಂಡ ಸಮಿತಿ ವತಿಯಿಂದ ವಿಜಯದಶಮಿ ಮಹೋತ್ಸವದ ಅಂಗವಾಗಿ ಉದಯಗಿರಿಯಲ್ಲಿ ನಡೆದ ಪಥಸಂಚಲನ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮಕ್ಕೆ ಮೊದಲು ಉದಯಗಿರಿಯಿಂದ ಉಳಿಯತ್ತಡ್ಕದ ವರೆಗೆ ಘೋಷ್ ಸಹಿತ ಗಣವೇಷಧಾರಿಗಳ ಆಕರ್ಷಕ ಪಥಸಂಚಲ ನಡೆಯಿತು. ನಿವೃತ್ತ ಡಿ.ವೈ.ಎಸ್.ಪಿ ಮೋಹನ್ ದಾಸ್ ಅಧ್ಯಕ್ಷತೆ ವಹಿಸಿದರು. ಬಳಿಕ ಸ್ವಯಂಸೇವಕರಿಂದ ವಿವಿಧ ಶಾರೀರಿಕ ಕವಾಯತು ನಡೆಯಿತು.