HEALTH TIPS

ತಪ್ಪಾದ ಇಂಜೆಕ್ಷನ್​ನಿಂದ ಬಾಲಕಿ ಮೃತ್ಯು; ಶವ ಎಸೆದು ಆಸ್ಪತ್ರೆ ಸಿಬ್ಬಂದಿ ಪರಾರಿ

               ಖನೌ: ವೈದ್ಯರ ನಿರ್ಲಕ್ಷ್ಯ ಮತ್ತು ಅಸೂಕ್ಷ್ಮತೆಯ ಆಘಾತಕಾರಿ ಘಟನೆಯೊಂದರಲ್ಲಿ ತಪ್ಪಾದ ಇಂಜೆಕ್ಷನ್​ ನೀಡಿದ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ.

                  ಬಾಲಕಿ ಮೃತಪಟ್ಟಿದ್ದಾಳೆ ಎಂಬ ವಿಚಾರವನ್ನು ಆಕೆಯ ಪೋಷಕರಿಗೆ ತಿಳಿಸದೆ, ಆಸ್ಪತ್ರೆ ಹೊರಗೆ ನಿಲ್ಲಿಸಿದ ಬೈಕ್​ನ ಪಕ್ಕದಲ್ಲಿ ಕುಳಿಸಿ ವೈದ್ಯರು ಹಾಗೂ ಸಿಬ್ಬಂದಿ ಪರಾರಿಯಾಗಿರುವುದಾಗಿ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

                           ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.


                 ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಾಧಿಕಾರಿ ಆರ್​.ಸಿ. ಗುಪ್ತಾ ಸಂತ್ರಸ್ತೆ ಭಾರತಿಗೆ (17) ಮಂಗಳವಾರ ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಘಿರೋರ್​ ಪ್ರದೇಶದಲ್ಲಿರುವ ರಾಧಾಸ್ವಾಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಆಸ್ಪತ್ರೆಯೆ ಸಿಬ್ಬಂದಿ ಹಾಗೂ ವೈದ್ಯರು ಬಳಿ ಆಕೆಯ ಆರೋಗ್ಯ ವಿಚಾರಿಸಿದಾಗ ಆಕೆ ಗುಣಮುಖಳಾಗುತ್ತಿರುವುದಾಗಿ ಹೇಳಿದ್ದಾರೆ.


               ಇದಾದ ಬಳಿಕ ಭಾರತಿಗೆ ವೈದ್ಯರು ಇಂಜೆಕ್ಷನ್​ ಒಂದನ್ನು ನೀಡಿದ್ದು, ಆಕೆ ಆರೋಗ್ಯ ತೀವ್ರವಾಗಿ ಹದಗೆಡಲು ಶುರುವಾಗಿದೆ. ತಕ್ಷಣವೇ ವೈದ್ಯರು ಆಕೆಯನ್ನು ಬೇರೆ ಆಸ್ಪತ್ರೆಗೆ ಕೊಂಡೊಯ್ಯುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದಾರೆ. ಇದಾದ ಕೆಲ ಕ್ಷಣಕ್ಕೆ ಆಕೆ ಮೃತಪಟ್ಟಿದ್ದು, ಸಂತ್ರಸ್ತೆಯ ಶವವನ್ನು ಆಸ್ಪತ್ರೆಯ ಮುಂಭಾಗ ನಿಲ್ಲಿಸಿದ್ದ ಬೈಕ್​ ಪಕ್ಕ ಕೂರಿಸಿ ಪರಾರಿಯಾಗಿದ್ದಾರೆ.

               ಈ ರೀತಿಯ ಅಮಾನವೀಯ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ತಪ್ಪಾದ ಚಿಕಿತ್ಸೆ ನೀಡಿ ರೋಗಿಯೊಬ್ಬರ ಸಾವಿಗೆ ಕಾರಣವಾಗಿರುವ ಆಸ್ಪತ್ರೆಯನ್ನು ಸೀಲ್​ ಮಾಡಲಾಗಿದ್ದು, ತಲೆಮಾರಿಸಿಕೊಂಡಿರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತಂಡವನ್ನು ರಚಿಸಿದ್ದು, ತಪ್ಪಿತಸ್ಥರನ್ನು ಸುಮ್ಮನೇ ಬಿಡುವ ಮಾತಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಆರ್​.ಸಿ. ಗುಪ್ತಾ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries