ಚಿತ್ರಕೂಟ : ಸಂಸ್ಕೃತ ಸಾಂಪ್ರದಾಯಿಕ ಭಾಷೆ ಮಾತ್ರವಲ್ಲದೆ ಅದು ನಮ್ಮ "ಪ್ರಗತಿ ಮತ್ತು ಅಸ್ಮಿತೆಯ ಭಾಷೆ"ಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
'ಸಂಸ್ಕೃತ ಹಲವಾರು ಭಾಷೆಗಳ ತಾಯಿ. ಸಾವಿರ ವರ್ಷಗಳ ಹಿಂದಿನ ಗುಲಾಮಗಿರಿಯ ಯುಗದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಪೂರ್ಣವಾಗಿ ನಾಶಮಾಡುವ ಪ್ರಯತ್ನಗಳು ನಡೆದವು. ಬಳಿಕ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಗುಲಾಮಗಿರಿಯ ಮನಸ್ಥಿತಿಯುಳ್ಳವರು ಸಂಸ್ಕೃತದ ಬಗ್ಗೆ ಪಕ್ಷಪಾತದ ಅಭಿಪ್ರಾಯವನ್ನು ಹೊಂದಿದ್ದರು'.
'ಇತರ ದೇಶಗಳ ಜನರು ತಮ್ಮ ಮಾತೃಭಾಷೆಯನ್ನು ತಿಳಿದಿದ್ದರೆ, ಅವರು ಅದನ್ನು ಮೆಚ್ಚುತ್ತಾರೆ, ಆದರೆ ಅವರು ಸಂಸ್ಕೃತ ಭಾಷೆಯನ್ನು ತಿಳಿದುಕೊಳ್ಳುವುದನ್ನು ಹಿಂದುಳಿದಿರುವಿಕೆಯ ಸಂಕೇತವೆಂದು ಪರಿಗಣಿಸುತ್ತಾರೆ. ಈ ಮನಸ್ಥಿತಿ ಹೊಂದಿರುವ ಜನರು ಕಳೆದ ಒಂದು ಸಾವಿರ ವರ್ಷಗಳಿಂದ ವಿಫಲರಾಗಿದ್ದಾರೆ ಮತ್ತು ಭವಿಷ್ಯದಲ್ಲೂ ಯಶಸ್ವಿಯಾಗುವುದಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.
ಚಿತ್ರಕೂಟದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾದ ತುಳಸಿ ಪೀಠವನ್ನು 1987ರಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಸ್ಥಾಪಿಸಿದರು.