HEALTH TIPS

ಫೇಸ್​ಬುಕ್, ಇನ್​ಸ್ಟಾ ಬಳಕೆದಾರರಿಗೆ ಮೆಟಾ ಶಾಕ್​: ನೋಡಬೇಕಾದ್ರೆ ದುಡ್ಡು ಕೊಡಬೇಕು!

             ವದೆಹಲಿ: ಮಾರ್ಕ್​ ಜುಕರ್​ ಬರ್ಗ್​ ನೇತೃತ್ವದ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ನ ಮಾತೃಸಂಸ್ಥೆ ಮೆಟಾ(meta)ವು 2024ರಿಂದ ಯಾಡ್ಸ್​ ಫ್ರೀ ಸಬ್​ ಸ್ಕ್ರಿಪ್ಷನ್​ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸುತ್ತಿದೆ.

                 ಚಿನ್ನ, ಬೆಳ್ಳಿ ಬೆಲೆ ಏರಿಕೆ: ಮತ್ತಷ್ಟು ದುಬಾರಿಯಾಗಲಿದೆ ಚಿನ್ನಾಭರಣ

ಯುರೋಪಿಯನ್ ಯೂನಿಯನ್‌ನಲ್ಲಿ ಜಾಹೀರಾತು ಮುಕ್ತ ಚಂದಾದಾರಿಕೆ ಯೋಜನೆಗಳ ಅನುಷ್ಠಾನದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಮೆಟಾ ಪ್ಲಾಟ್‌ಫಾರ್ಮ್‌ಗಳು 2024 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಇದೇ ರೀತಿಯ ಯೋಜನೆಗಳನ್ನು ಪರಿಚಯಿಸಲು ಆಲೋಚಿಸುತ್ತಿದೆ ಎಂದು ವರದಿಯಾಗಿದೆ.
               ಫೇಸ್​ ಬುಕ್​, ಇನ್​ಸ್ಟಾಗ್ರಾಮ್​ ಅನ್ನು ಜಾಹೀರಾತುಗಳಿಲ್ಲದೆ ಬಳಕೆ ಮಾಡುವುದು ಎಂದರೆ ಖಚಿತವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಜಾಹೀರಾತು ನೋಡಿಯೇ ಇವುಗಳನ್ನು ಬಳಸುತ್ತೇವೆ ಎನ್ನುವವರು ಮಾತ್ರ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ ಎನ್ನಲಾಗುತ್ತಿದೆ.

            ಕೇವಲ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಈ ವಿಧಾನ ಅನುಷ್ಠಾನಕ್ಕೆ ಸಂಸ್ಥೆ ಯೋಚಿಸುತ್ತಿದೆ. ಟ್ರಯಲ್​ ನಂತರ 2024ರ ಮಧ್ಯಭಾಗದಲ್ಲಿ ಅಥವಾ ವರ್ಷಾಂತ್ಯಕ್ಕೆ ಜಾಹೀರಾತು ರಹಿತ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಮೆಟಾ ಆಡಳಿತ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.

               ಈಗಾಗಲೇ ಬಳಕೆದಾರರ ಅನುಮತಿಯಿಲ್ಲದೆ ಪ್ರಕಟಣೆ ಹೊರಡಿಸಿದ್ದಕ್ಕೆ ಐರ್ಲೆಂಡ್​ ಪ್ರೈವೇಸಿ ಕಮಿಷನ್​ ಮೆಟಾಗೆ ಭಾರೀ ದಂಡ ವಿಧಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಹೀರಾತು ರಹಿತ ಬಳಕೆ ವಿಧಾನವನ್ನು ತರಲು ಉದ್ದೇಶಿಸುತ್ತಿದೆ ಎನ್ನಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries