ನವದೆಹಲಿ: ಅಗ್ನಿವೀರ್ ಅಮೃತ್‌ಪಾಲ್ ಸಿಂಗ್ ಕರ್ತವ್ಯದಲ್ಲಿದ್ದಾಗಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ನವದೆಹಲಿ: ಅಗ್ನಿವೀರ್ ಅಮೃತ್‌ಪಾಲ್ ಸಿಂಗ್ ಕರ್ತವ್ಯದಲ್ಲಿದ್ದಾಗಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ, ಅಂತ್ಯಕ್ರಿಯೆಯಲ್ಲಿ ಹುತಾತ್ಮರಿಗೆ ನೀಡುವ ಮಿಲಿಟರಿ ಗೌರವಗಳನ್ನು ನೀಡಲಾಗಿಲ್ಲ ಎಂದು ಸೇನೆ ಭಾನುವಾರ ತಿಳಿಸಿದೆ.
ಅಗ್ನಿಪಥ್ ಮೂಲಕ ಸೇನೆಗೆ ಸೇರಿದ್ದರಿಂದ ಅಂತ್ಯಕ್ರಿಯೆ ವೇಳೆ ಮಿಲಿಟರಿ ಗೌರವ ನೀಡಲಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಸೇನೆ, ಸೈನಿಕರು ಅಗ್ನಿಪಥ್ ಯೋಜನೆಯ ಅನುಷ್ಠಾನಕ್ಕೆ ಮೊದಲು ಅಥವಾ ನಂತರ ಪಡೆಗೆ ಸೇರಿದರೂ ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಿದೆ.
ಸೇನೆಯ ನಗ್ರೋಟಾ-ಪ್ರಧಾನ ಕಚೇರಿಯ ವೈಟ್ ನೈಟ್ ಕಾರ್ಪ್ಸ್, ಶನಿವಾರದಂದು ರಜೌರಿ ಸೆಕ್ಟರ್‌ನಲ್ಲಿ ಗಸ್ತಿನಲ್ಲಿದ್ದಾಗ ಅಮೃತ್ ಪಾಲ್ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಿದೆ.
ಭಾನುವಾರ ರಾತ್ರಿ ಹೇಳಿಕೆಯಲ್ಲಿ, ಸಿಂಗ್ ಅವರ ದುರದೃಷ್ಟಕರ ಸಾವಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಕೆಲವು 'ತಪ್ಪು ತಿಳಿವಳಿಕೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಎಸ್ಕಾರ್ಟ್‌ಗಳೊಂದಿಗೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ' ಎಂದು ಮಾಹಿತಿ ನೀಡಿದೆ.