ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆ ಇತ್ತೀಚೆಗೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಹಾಗೂ ಮಂಡಲ ಪ್ರಭಾರಿ ಸುಧಾಮ ಗೋಸಾಡ ಮಾರ್ಗದರ್ಶನದಲ್ಲಿ ಸೇರಿದ ಮಂಡಲ ಕೋರ್ ಸಭೆಯಲ್ಲಿ ಮಂಡಲ ಸಮಿತಿಯ ನೂತನ ನೇಮಕ ಪಟ್ಟಿ ಅಂತಿಮಗೊಳಿಸಲಾಯಿತು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾಗಿ ಆದರ್ಶ ಬಿ.ಎಂ., ಪ್ರಧಾನ ಕಾರ್ಯದರ್ಶಿಯಾಗಿ ಯತಿರಾಜ್ ಶೆಟ್ಟಿ ಕೆದುಂಬಾಡಿ, ರಾಧಾಕೃಷ್ಣ ಭಟ್, ಉಪಾಧ್ಯಕ್ಷರಾಗಿ ಚಂದ್ರಹಾಸ ಪೂಜಾರಿ ಕಡಂಬಾರ್, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಜಯಶ್ರೀ ಮಾಡ, ಕಾರ್ಯದರ್ಶಿಗಳಾಗಿ ತುಳಸಿ ಕುಮಾರಿ ವರ್ಕಾಡಿ, ಚಂದ್ರಾವತಿ ಬಾಯರ್, ಕೃಷ್ಣಪ್ಪ ಮಡಿಕ ವರ್ಕಾಡಿ, ಸೋಶಿಯಲ್ ಮೀಡಿಯಾ ಸಂಯೋಜಕರಾಗಿ ಪ್ರಶಾಂತ್ ಜೋಡುಕಲ್ಲು, ಸಂತೋಷ್ ಶೆಟ್ಟಿ ದೈಗೋಳಿ ಇವರುಗಳನ್ನು ನೇಮಕ ಮಾಡಿ ಮಂಡಲಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು. ಮಣಿಕಂಠ ರೈ ಪಟ್ಲ, ಎ.ಕೆ.ಕಯ್ಯಾರು, ಅಶ್ವಿನಿ ಎಂ ಎಲ್.ಸಭೆಯಲ್ಲಿ ಉಪಸ್ಥಿತರಿದ್ದರು.