ಮಧೂರು:ಇಲ್ಲಿನ ಸಾಂಸ್ಕೃತಿಕ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ತರುಣ ಕಲಾವೃಂದ (ರಿ) ಉಳಿಯ ಇದರ 2023- 24 ರ *ವಾರ್ಷಿಕ ಸಭೆ*, ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರು ಪ್ರಭಾಕರ ಉಳಿಯ ಇವರ ಅಧ್ಯಕ್ಷತೆಯಲ್ಲಿ, ಗೌರವಾಧ್ಯಕ್ಷರು ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಆಸ್ರರು ಸಭೆಯನ್ನು ಉದ್ಘಾಟಿಸಿ ಸಂಘದ ಬೆಳವಣಿಗೆಯನ್ನು ಮತ್ತು ಯೋಜನೆಗಳನ್ನು ಶ್ಲಾಘಿಸುತ್ತಾ ಮಾತನಾಡಿದರು.
ದಿವ್ಯಾಗಟ್ಟಿಯವರು ಕಳೆದ ವರ್ಷದ ವಾರ್ಷಿಕ ವರದಿ ಹಾಗೂ ಸುರೇಶ್ .ಯು ಲೆಕ್ಕಪತ್ರವನ್ನು ಮಂಡಿಸಿದರು.ನಂತರ ಹೊಸ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ವಿಠಲಗಟ್ಟಿ ಪರಕ್ಕಿಲ ಅಧ್ಯಕ್ಷರು, ಉಪಧ್ಯಾಕ್ಷರು ಅನಿಲ್ ಕುಮಾರ್ ಯು. ಬಿ, ನಾರಾಯಣ ಆಸ್ರ,ಪ್ರಧಾನ ಕಾರ್ಯದರ್ಶಿ ಸವಿನ್ ಕುಮಾರ್ ಯು, ಜತೆ ಕಾರ್ಯದರ್ಶಿಗಳಾಗಿ ಅಜಿತ್ ಕುಮಾರ್, ಪದ್ಮರಾಜ ಪರಕ್ಕಿಲ, ದೃಶಿತ್, ಕೋಶಾಧಿಕಾರಿಗಳಾಗಿ ಅರುಣ್ ಕುಮಾರ್, ಜಗದೀಶ , ಕ್ರೀಡಾ ಕಾರ್ಯದರ್ಶಿಗಳು ಕಮಲಾಕ್ಷ ಯು, ಸಂತೋಷ್ ಆರ್ ಗಟ್ಟಿ, ಸಾಂಸ್ಕೃತಿಕ ರಂಗದ ಕಾರ್ಯದರ್ಶಿಗಳು ಯೋಗೀಶ್ ಉಳಿಯ, ಜಯರಾಮ ಗಟ್ಟಿ, ಸಮಿತಿಯ ನಿರ್ದೇಶಕರಾಗಿ ಪ್ರಭಾಕರ ಉಳಿಯ, ಬಾಲಕೃಷ್ಣ ನಂಬೀಶ, ಬಾಬು ಪಾಟಾಳಿ, ಸುರೇಶ್ ಯು , ಎ. ಎಸ್.ಐ ಶಿವ ಪ್ರಸಾದ್ , ಬಾಬು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು. ಸಭೆಯಲ್ಲಿ ಸಂಘದ ಸದಸ್ಯರು,ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರು ಪ್ರಭಾಕರ ಉಳಿಯ ಹೊಸ ಸಮಿತಿಗೆ ಶುಭಹಾರೈಸಿ ಅಧಿಕಾರವನ್ನು ಹಸ್ತಾಂತರಿಸಿದರು. ಮಹಾದೇವ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಜತೆ ಕಾರ್ಯದರ್ಶಿ ಪದ್ಮರಾಜ ಪರಕ್ಕಿಲ ಸ್ವಾಗತಿಸಿದ ಸಭೆಯನ್ನು ದಿವ್ಯಾಗಟ್ಟಿ ಪರಕ್ಕಿಲ ನಿರೂಪಿಸಿ ,ಹೊಸ ಸಮಿತಿಯ ಜತೆ ಕಾರ್ಯದರ್ಶಿ ದೃಶಿತ್ ವಂದಿಸಿದರು.