ಮುಳ್ಳೇರಿಯ: ಬೆಳ್ಳೂರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಅ.15 ರಂದು ಬೆಳಿಗ್ಗೆ ಶ್ರೀದೇವಿ ಪ್ರತಿಷ್ಠೆ, ಭಜನೆ, ಮಧ್ಯಾಹ್ನ ಪೂಜೆ, ರಾತ್ರಿ ಪೂಜೆಗಳು ನಡೆಯಲಿವೆ. ಅ.20 ರಂದು ಬೆಳಿಗ್ಗೆ 11.30 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಆಡಳಿತ ಟ್ರಸ್ಟಿ ಎಂ.ಬಿ.ಗಂಗಾಧರ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡುವರು. ಕುಂಟಾರು ವಾಸುದೇವ ತಂತ್ರಿ ಉಪಸ್ಥಿತರಿರುವರು. ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂದನ ಅಯರ್, ನ್ಯಾಯವಾದಿ ಸಂಕಪ್ಪ ಪೂಜಾರಿ ಉಡುಪಿ, ನ್ಯಾಯವಾದಿ ಬೇರಿಕೆ ರಾಮಪ್ರಸಾದ್ ಮುಖ್ಯ ಅತಿಥಿಗಳಾಗಿರುವರು. ಉಪಾಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್, ಡಾ.ಮೋಹನದಾಸ್ ರೈ ನಾಟೆಕಲ್ಲು ಉಪಸ್ಥಿತರಿರುವರು. ಬಳಿಕ ಮಹಾಪೂಜೆ, ಅನ್ನದಾನ ನಡೆಯಲಿದೆ. ಪ್ರತಿನಿತ್ಯ ಸಂಜೆ 6 ರಿಂದ ಶ್ರೀದೇವಿಯ ಪೂಜೆ, ಮಹಾಪೂಜೆ, ಭಜನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.23 ರಂದು ಬೆಳಿಗ್ಗೆ 7 ರಿಂದ ಆಯುಧಪೂಜೆ, 24 ರಂದು ಬೆಳಿಗ್ಗೆ 9 ರಿಂದ ವಿದ್ಯಾರಂಭ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.