ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಕಂಬಮಲೆಯಲ್ಲಿ ನಿರಂತರ ದಾಳಿ ನಡೆಸುತ್ತಿರುವ ನಕ್ಸಲ್ ತಂಡದ ಚಿತ್ರಗಳನ್ನು ಪೋಲೀಸರು ಬಿಡುಗಡೆ ಮಾಡಿದ್ದಾರೆ. ಸಿಪಿ ಮೊಯ್ತೀನ್ ಸೇರಿದಂತೆ 18 ನಕ್ಸಲ್ ಗಳ ಚಿತ್ರಗಳನ್ನು ಪೋಲೀಸರು ಬಿಡುಗಡೆ ಮಾಡಿದ್ದಾರೆ.
ನಕ್ಸಲ್ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಕಂಬಮಲೆಯ ತಲಪ್ಪುಳದಲ್ಲಿ ನಕ್ಸಲ್ ಗಳು ನಾಲ್ಕು ಬಾರಿ ದಾಳಿ ನಡೆಸಿದ್ದರು. ಅರಣ್ಯ ಇಲಾಖೆ ಕಚೇರಿಯನ್ನು ಧ್ವಂಸಗೊಳಿಸಿದ ತಂಡವು ಎರಡು ದಿನಗಳ ನಂತರ ಮತ್ತೆ ಮರಳಿದೆ. ಪೋಲೀಸರು ಅಳವಡಿಸಿದ್ದ ಕ್ಯಾಮೆರಾಗಳನ್ನೂ ಧ್ವಂಸಗೊಳಿಸಿದ್ದರಿಂದ ಸ್ಥಳೀಯರು ಭಯದಲ್ಲಿದ್ದಾರೆ.
ನಕ್ಸಲ್ ಭಯೋತ್ಪಾದಕರ ಭಯದಿಂದ ಕೆಲಸಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಚಹಾ ತೋಟದ ಕಾರ್ಮಿಕರು. ರಾತ್ರಿ ವೇಳೆ ನಕ್ಸಲ್ ತಂಡ ಆಗಮಿಸುತ್ತಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ತಲಪುಳ ಪ್ರದೇಶದಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.