ಕಾಸರಗೋಡು: ಭವ್ಯ ಇತಿಹಾಸ, ಪರಂಪರೆ ಮತ್ತುಸಂಸ್ಕøತಿಗಳನ್ನು ಹೊಂದಿದ ಭಾರತದ ಅಧ್ಯಾತ್ಮಿಕತೆ ನಮ್ಮ ಆಚರಣೆಗಳ ಜೀವಾಳವಾಗಿರುವುದಾಗಿ ನಿವೃತ್ತ ಪ್ರಾಧ್ಯಾಪಕಪ್ರೊ.ಕೆ.ಎ.ಪದ್ಮನಾಭ ಪೂಜಾರಿ ತಿಳಿಸಿದ್ದಾರೆ. ಅವರು ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಕಾಸರಗೋಡು ಕನ್ನಡ ಬಳಗ, ಕನ್ನಡ ಸ್ನಾತಕೋತ್ತರ ಅಧ್ಯಯನಮತ್ತು ಸಂಶೋಧನ ವಿಭಾಗವು ಆಯೋಜಿಸಿದ ದಸರಾ ನಾಡಹಬ್ಬಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಉಪನ್ಯಾಸ ನೀಡಿ ಮಾತನಾಡಿದರು.
ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ಸಮಾರಂಭ ಉದ್ಘಾಟಿಸಿದರು. ಕನ್ನಡವಿಭಾಗದ ಮುಖ್ಯಸ್ಥೆ ಪ್ರೊ. ಸುಜಾತ ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಭಾರತೀಯ ಸೈನ್ಯಕ್ಕೆ ಅಗ್ನಿವೀರರಾಗಿ ಆಯ್ಕೆಯಾದ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಸಚಿನ್ ಮತ್ತು ಗಿರೀಶ ನಾಯ್ಕ ಅವರನ್ನು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಅವರು ಸಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿವಿಜೇತರಾದ ಸ್ನಾತಕೋತ್ತರ ಪದವಿ, ಪದವಿ, ಪದವಿಪೂರ್ವ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಬಳಗದ ಕಾರ್ಯದರ್ಶಿ ಡಾ. ಬಾಲಕೃಷ್ಣ ಹೊಸಂಗಡಿ ಸ್ವಾಗತಿಸಿದರು. ಡಾ.ರಾಧಾಕೃಷ್ಣ ಬೆಳ್ಳೂರು ಹಾಗೂ ಡಾ.ಆಶಾಲತಾ ಸಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾ.ಸವಿತಾ ಬಿ. ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.