ಪೆರ್ಲ: ಕುಟುಂಬಶ್ರೀ ಸ್ಥಾಪನೆಗೊಂಡು ಇಪ್ಪತೈದು ವರ್ಷಗಳಾಯಿತು.ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಮಹಿಳೆಯರ ಸ್ವಾವಲಂಬನೆ ಬದುಕಿಗೆ ,ಸಮಾಜದಲ್ಲಿ ಮಹಿಳೆಯರನ್ನು ಗುರುತಿಸುವಂತೆ ಮಾಡಲು ಕುಟುಂಬಶ್ರೀ ಕಾರಣವಾಗಿದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಯಸ್ ನುಡಿದರು.
ಅವರು ಸ್ವರ್ಗ ವಾರ್ಡ್ ಮಟ್ಟದ ಎ.ಡಿ.ಎಸ್ ನೇತೃತ್ವದಲ್ಲಿ ಸ್ವರ್ಗ ಶಾಲೆಯಲ್ಲಿ ನಡೆದ ಕುಟುಂಬಶ್ರೀ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ ವಹಿಸಿದರು.ಸಭೆಯಲ್ಲಿ ಸ್ವರ್ಗ ವಾರ್ಡ್ ಮಟ್ಟದ ಕುಟುಂಬಶ್ರೀ ಎ.ಡಿ.ಎಸ್ ಅಧ್ಯಕ್ಷೆ ಸುಮತಿ ,ಆಶಾ ವರ್ಕರ್ ಚಂದ್ರಾವತಿ ಎ ಟಿ,ಶಿಕ್ಷಕರಾದ ರಂಜಿತ್ ಉಪಸ್ಥಿತರಿದ್ದರು.ಪೂರ್ಣಿಮಾ ಬೈರಡ್ಕ ಸ್ವಾಗತಿಸಿ,ಪ್ರೇಮ ಚೆನ್ನುಮೂಲೆ ವಂದಿಸಿದರು.ಚಂದ್ರಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಕುಟುಂಬಶ್ರೀ ಸದಸ್ಯೆಯರಿಗೆ ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಿತು.