ಇತ್ತೀಚಿನ ದಿನಗಳಲ್ಲಿ, ವಾಟ್ಸ್ ಆಫ್ ಗುಂಪುಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಪೋಸ್ಟ್ ಎಲ್ಲಾ ವಾಟ್ಸ್ ಆಫ್ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ ಮತ್ತು ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬ ಸಂದೇಶವಾಗಿದೆ.
ಈ ಸಂದೇಶಗಳನ್ನು ಹಲವು ವರ್ಷಗಳಿಂದ ನಿರಂತರ ಆಗಾಗ ರವಾನಿಸುತ್ತಿರುವಾಗ ಅದರ ಹಿಂದಿನ ಸತ್ಯವನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಾಗಿದೆ.
ಈ ಸಂದೇಶಗಳು ನಕಲಿ ಎಂದು ಕೇರಳ ಪೋಲೀಸರು ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಹರಿದಾಡಿದ್ದ ಈ ನಕಲಿ ಸಂದೇಶಗಳು ಮತ್ತೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿವೆ. ಆದರೆ ಈ ರೀತಿಯ ಯಾವುದೇ ಅಧಿಕೃತ ಸಂದೇಶವನ್ನು ಸರ್ಕಾರಿ ಸಂಸ್ಥೆಗಳು ನೀಡಿಲ್ಲ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ. ಇಂತಹ ಪೋಸ್ಟ್ ಗಳು ಗಮನಕ್ಕೆ ಬಂದರೆ ಶೇರ್ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪೋಲೀಸರು ಹೇಳಿದ್ದಾರೆ.
ಇದೇ ವೇಳೆ ಮಕ್ಕಳ ಅಶ್ಲೀಲ ಚಿತ್ರಗಳು, ಅಪರಾಧಗಳನ್ನು ಉತ್ತೇಜಿಸುವ ಪೋಸ್ಟ್‍ಗಳು, ಧಾರ್ಮಿಕ ಉದ್ವೇಗ ಹೆಚ್ಚಿಸುವ ಪೋಸ್ಟ್‍ಗಳು ಇತ್ಯಾದಿಗಳನ್ನು ಹರಡುವುದು ಅಪರಾಧ ಎಂದು ಪೋಲೀಸರು ಮಾಹಿತಿ ನೀಡಿರುವರು.