ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ನೇತೃತ್ವದ 1600ನೇ ಮದ್ಯವರ್ಜನ ಶಿಬಿರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನವ ಜೀವನ ಸಮಿತಿ ಕುತ್ಯಾಳ ಇದರ ಸದಸ್ಯರು ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಒಂದು ದಿನದ ಅನ್ನದಾನ ಸೇವೆ ನೀಡಿದರು. ಈ ಸಂದಭರ್Àದಲ್ಲಿ ಯೋಜನಾಧಿಕಾರಿ ಮುಖೇಶ್, ಜನ ಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ, ಜನ ಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ, ಹಿರಿಯ ಸದಸ್ಯ ನಾರಾಯಣ ಕಳತ್ತೂರು, ಸದಸ್ಯ ವಲ್ಸರಾಜ್ ಉಪ್ಪಳ, ಕುತ್ಯಾಳ ನವ ಜೀವನ ಸಮಿತಿ ಅಧ್ಯಕ್ಷ ಉದಯ ಕುಮಾರ್, ಚಿದಾನಂದ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.